ಸರ್ಕಾರಿ ಶಾಲೆಯಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷರ ಜನ್ಮದಿನಾಚರಣೆ

11 ckm 1
ಚಿಕ್ಕಮಗಳೂರು ಕೆಂಪನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಾಗೂ ನೋಟ್ ಬುಕ್ ವಿತರಿಸಲಾಯಿತು. ಪಿ.ಸಿ.ರಾಜೇಗೌಡ, ಕಳವಾಸೆ ರವಿ, ಜಯಪ್ರಕಾಶ್, ಸತೀಶ್, ಅನಿಲ್ ಆನಂದ್, ವೀರೇಶ್, ಹೇಮಂತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರು ಕನ್ನಡಿಗರ ಧ್ವನಿಯಾಗಿ, ನಾಡು, ನುಡಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಹೋರಾಟಗಾರ. ಅವರು ತಮ್ಮ ಜೀವನವನ್ನು ಕನ್ನಡತಾಯಿಯ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದರು.

ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರ ಜನ್ಮ ದಿನದ ಅಂಗವಾಗಿ ನಗರದ ಕೆಂಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿ ಬಳಿಕ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಸಿಹಿ ವಿತರಿಸಿ ಮಾತನಾಡಿದ ಅವರು, ಕನ್ನಡ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕುಮಾರ್ ಅವರು ಕನ್ನಡಪರ ಕಾರ್ಯಗಳಿಂದಲೇ ಯುವಮೂಹವನ್ನು ಸಂಘಟಿಸಿದ್ದಾರೆ. ನಾಡು-ನುಡಿಯ ಸೇವೆಯೇ ಅವರ ಗುರಿಯಾಗಿದೆ ಎಂದರು.
ಕನ್ನಡ ನಾಡು- ನುಡಿ ಕುರಿತಾದ ಬದ್ಧತೆ ಅಪಾರ. ಕನ್ನಡದ ಯುವಕರನ್ನು ಸೂಜಿಗಲ್ಲಿನಂತೆ ಸೆಳೆ ಯುವ ಶಕ್ತಿ ಅವರಿಗಿದೆ. ಕನ್ನಡ ಅಸ್ಮಿತೆಗೆ ಧಕ್ಕೆ ಉಂಟಾದರೆ ರಾಜಿರಹಿತ ಹೋರಾಟ ಮಾಡಿಕೊಂಡು ಬಂದಿರುವ ಅವರು ಆ ಗುಣದಿಂದಲೇ ಸಂಘಟನೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.
ಕನ್ನಡಸೇನೆ ಗೋವಾ ರಾಜ್ಯಾಧ್ಯಕ್ಷ ರತ್ನಾಕರ್ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡಾಭಿಮಾನಿಗಳ ಬಳಗ ಬಹಳಷ್ಟು ದೊಡ್ಡದಿದೆ. ರಾಜ್ಯಾಧ್ಯಕ್ಷ ಹುಟ್ಟುಹಬ್ಬವನ್ನು ಮಕ್ಕಳಿಗೆ ಸಾಮಾಗ್ರಿ, ನೋಟ್‌ಪುಸ್ತಕ ವಿತರಿಸಿ ಆಚರಿಸುತ್ತಿರುವುದು ಉತ್ತಮ ವಿಚಾರ ಎಂದು ತಿಳಿಸಿದರು.
ಕನ್ನಡಿಗರು ಸ್ವಾಭಿಮಾನಿಗಳು, ಪ್ರತಿಯೊಂದು ಭಾಷೆಯ ಮೇಲೆ ವಿಶೇಷ ಅಭಿಮಾನ, ಪ್ರೀತಿ ಹೊಂದಿರುವ ಗುಣವುಳ್ಳವರು. ಆದರೆ ಮಾತೃಭಾಷೆಗೆ ಧಕ್ಕೆ ಅಥವಾ ಅಗೌರವ ಉಂಟಾದರೆ ಸಹಿಸುವ ಶಕ್ತಿಯಿಲ್ಲ. ಒಂದು ವೇಳೆ ತಾಯ್ನುಡಿಗೆ ಮಸಿ ಬಳಿಯುವ ಕೆಲಸ ಮಾಡುವವರ ವಿರುದ್ಧ ಕಾನೂನಾತ್ಮಕವಾಗಿ ಪುಟಿದೇಳಬೇಕಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಸೇ ಜಿಲ್ಲಾ ವಕ್ತಾರ ಕಳವಾಸೆ ರವಿ, ಆಟೋ ಘಟಕದ ಅಧ್ಯಕ್ಷ ಜಯ ಪ್ರಕಾಶ್, ಸಂಘಟನಾ ಸಂಚಾಲಕ ಸತೀಶ್, ಭೂಮಿಕಾ ಟಿವಿ ಸಂಪಾದಕ ಅನಿಲ್‌ಆನಂದ್, ಮುಖಂಡರಾದ ವೀರೇಶ್, ಹೇಮಂತ್, ಪಾಲಾಕ್ಷಿ, ಅನ್ವರ್, ಶಂಕರೇಗೌಡ, ಚೇತನ್, ಪುಷ್ಪಾ, ಭವ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net