ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ

Bhosaraju instructions for necessary preparation for Kaveri Tula sankramana
Published on

ಮಡಿಕೇರಿ:

ಜನಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಪಂ. ದೀನ್ ದಯಾಳ್ ಉಪಾಧ್ಯಾಯರ ೧೦೭ನೇ ಜನ್ಮದಿನದ ಸಂಸ್ಮರಣಾ ಕಾರ್ಯಕ್ರಮ ಮೇಕೇರಿಯಲ್ಲಿ ನಡೆಯಿತು. ಪಂ. ದೀನ್ ದಯಾಳ್ ಉಪಾಧ್ಯಯರ ಆದರ್ಶಮಯ ಬದುಕಿನ ಬಗ್ಗೆ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಈ ಸಂದರ್ಭ ಮಾತನಾಡಿದರು. ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಈ ಸಂದರ್ಭ ಗೌರವಿಸಲಾಯಿತು.

ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಸತೀಶ್, ಶಕ್ತಿಕೇಂದ್ರದ ಸಂಚಾಲಕ ಚೋಂಡಿರ ಕಿರಣ್ ಬೂತ್ ಸಮಿತಿ ಅಧ್ಯಕ್ಷ ವಿಜು ಹರೀಶ್, ಗ್ರಾ.ಪಂ. ಸದಸ್ಯೆ ಸುಶೀಲಾಮಧು, ಪ್ರಮುಖರಾದ ಉಮೇಶ್ ಟಿ.ಎನ್., ಜಿತಿನ್ ಎಂ.ಆರ್., ಗ್ರಾ.ಪಂ. ಮಾಜಿ ಸದಸ್ಯೆ ಅನುಸೂಯ ಸೇರಿದಂತೆ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net