ಸಮಾಜಕ್ಕೆ ಹೆಗ್ಗಡೆಯವರ ಕೊಡುಗೆ ಅಪಾರ : ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಬಣ್ಣನೆ

New Project (33)
Published on

ಬೆಳ್ತಂಗಡಿ: ದೇಶ ಮತ್ತು ಸಮಾಜಕ್ಕೆ ಹೆಗ್ಗಡೆ ಅವರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಪೂಜ್ಯರ ಆದರ್ಶಗಳನ್ನು ಅಧ್ಯಯನ ವಾಡಿ ಅನುಸರಿಸಬೇಕು. ಮನುಕುಲಕ್ಕೆ ವರದಾನವಾಗಿರುವ ಅವರ ಜೀವನ, ಸಾಧನೆ ಸಾಮೀಪ್ಯದಿಂದ ತಿಳಿಯುವಂತಾಗಿರುವುದು ನಮ್ಮ ಪುಣ್ಯದ ಫಲ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಧರ್ವಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 76ನೇ ಜನ್ಮದಿನದ ಸಂಭ್ರವಾಚರಣೆ ಪ್ರಯುಕ್ತ ನಡೆದ ವಿದ್ಯಾರ್ಥಿವೇತನ ವಿತರಣಾ ಸವಾರಂಭ ಉದ್ಘಾಟಿಸಿ ವಾತನಾಡಿದರು.

ವಾಗ್ಮಿ ಎನ್.ಆರ್.ದಾಮೋದರ ಶರ್ಮ ಬಾರ್ಕೂರು ವಿಶೇಷ ಉಪನ್ಯಾಸ ನೀಡಿ, ಡಾ.ಹೆಗ್ಗಡೆ ಅವರ ಜನ್ಮಕ್ಷೇತ್ರ ಧರ್ಮಸ್ಥಳವಾದರೆ ಅವರ ಸೇವಾ ಸ್ಥಳ ಭಾರತ. ಅವರ ಆಯಾಮವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಧರ್ಮಪೀಠವನ್ನು ಧರ್ಮಗಳೇ ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ಕೀರ್ತಿಶಾಲಿಗಳಾಗಿ ಸಾಧನೆಗೈದರೆ ಸಂಸ್ಥೆ ಬೆಳಗುತ್ತದೆ. ಸವಾಜದಿಂದ ಸಕಾರಾತ್ಮಕ-ನಕಾರಾತ್ಮಕ ಚಿಂತನೆ ಬಂದಾಗ ನಾವು ಹಿಗ್ಗದೆ-ಕುಗ್ಗದೆ ಮುನ್ನಡೆಯಬೇಕು. ಪಾಲಕರ, ಧರ್ಮಸ್ಥಳದ, ದೇವರ ಋಣದೊಂದಿಗೆ ವಿದ್ಯೆ, ಆಹಾರ ಕೊಟ್ಟವರನ್ನು ಜನ್ಮದಾತರಂತೆ ಪೂಜಿಸಿ ಎಂದರು.

ಪ್ರಮುಖರಾದ ವಿವೇಕ್ ಆಳ್ವ ಶುಭ ಹಾರೈಸಿದರು. ಸಂಸ್ಥೆಯ ಹಳೇ ವಿದ್ಯಾರ್ಥಿ, ಇ.ಎನ್.ಟಿ. ವೈದ್ಯ ಡಾ.ರೋಹನ್ ಎಂ.ದೀಕ್ಷಿತ್ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು. ಕ್ಷೇತ್ರದ ಪ್ರತಿನಿಧಿ ಶಿವಾನಂದ್ ಆಚಾರ್ಯ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ‘ನಾ ಕಂಡಂತೆ ಪೂಜ್ಯರು’ ಎಂಬ ವಿಚಾರದಲ್ಲಿ ವಾತನಾಡಿದರು.

ಪ್ರಾಂಶುಪಾಲ ಪ್ರಮೋದ್ ಕುವಾರ್ ಬಿ. ಸ್ವಾಗತಿಸಿದರು. ಉಪಪ್ರಾಚಾರ್ಯ ಡಾ.ರಾಜೇಶ್ ಬಿ. ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಹಾಗೂ ಆಂಗ್ಲ ಭಾಷಾ ವಿಭಾಗ ಉಪನ್ಯಾಸಕಿ ನಿಹಾರಿಕಾ ಜೈನ್ ನಿರೂಪಿಸಿದರು.

ವಿದ್ಯಾರ್ಥಿವೇತನ, ಬಹುಮಾನ ವಿತರಣೆ

2023-24ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.95 ಪಡೆದವರಿಗೆ ಸಂಸ್ಥೆಯ ಪಿ.ಯು.ಸಿ.ಯಲ್ಲಿ ಉಚಿತ ಪ್ರವೇಶ, ಶೇ.90 ಅಂಕ ಪಡೆದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.50ರಂತೆ ರಿಯಾಯಿತಿ ಸೇರಿ, ಸಾಧಕ ಒಟ್ಟು 93 ವಿದ್ಯಾರ್ಥಿಗಳಿಗೆ 18,62,950 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ಡಾ.ಹೆಗ್ಗಡೆ ಜನ್ಮದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುವಾನ ವಿತರಿಸಲಾಯಿತು.

ಕ್ಷೇತ್ರದ ಎಲ್ಲ ಸೇವೆಗಳಲ್ಲೂ ಗುಣಮಟ್ಟ ಮತ್ತು ಪರಿಪೂರ್ಣತೆಗೆ ಆದ್ಯತೆ ನೀಡುವುದರಿಂದ ಇಂದು ಕ್ಷೇತ್ರ ಪ್ರಖ್ಯಾತಿ ಗಳಿಸಲು ಸಾಧ್ಯವಾಗಿದೆ. 10 ಸಾವಿರಕ್ಕೂ ಅಧಿಕ ಶಿಕ್ಷಕರು, 57 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ವಾಡುವ ಮೂಲಕ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಯಜ್ಞ ನಡೆಯುತ್ತಿದೆ. ಪ್ರತಿ ವರ್ಷ ಕ್ಷೇತ್ರದಿಂದ 30 ಕೋ.ರೂ.ಗೂ ಅಧಿಕ ವಿದ್ಯಾರ್ಥಿವೇತನ ಹಾಗೂ ಸರ್ಕಾರಿ ಶಾಲೆಗೆ ಬೆಂಚ್-ಡೆಸ್ಕ್ ವಿತರಣೆಗಾಗಿ ಮೀಸಲಿಡಲಾಗುತ್ತಿದೆ. ಡಾ.ಎಸ್.ಸತೀಶ್ಚಂದ್ರ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ https://www.vijayavani.net/shivarpanam-shramadana-at-sadashiva-temple https://www.vijayavani.net/100th-commemoration-program-of-dr-padur-gururaj-bhat

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net