

ಗದಗ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನನ, ಮರಣ ಪ್ರಮಾಣ ಪತ್ರದ ಶುಲ್ಕವನ್ನು 10 ಪಟ್ಟು ಹೆಚ್ಚಿಗೆ ಮಾಡಿದೆ. ಇದರಿಂದ ಸಾಮಾನ್ಯ ಜೇಬಿಗೆ ಹೊರೆ ಬೀಳುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಖಾಲಿ ಆಗಿರುವ ಬೊಕ್ಕಸವನ್ನು ತುಂಬಲು ಸಾಮಾನ್ಯರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ. ಎಂ. ಹಿರೇಮಠ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡುರುವ ಅವರು, ಬಸ್, ಪೆಟ್ರೋಲ್, ವಿದ್ಯುತ್, ಹಾಲು, ಸಾರಾಯಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದ ಸರ್ಕಾರ ಇದೀಗ ಜನನ, ಮರಣದಲ್ಲೂ ಹಣ ಗಳಿಸಲು ಮುಂದಾಗಿದೆ. ಆಸ್ತಿ ಹಂಚಿಕೆ, ಸೊತ್ತುಗಳ ವಿಲೆವಾರಿ, ಬ್ಯಾಂಕ್ ವಹಿವಾಟು, ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಿಗೆ ಜನನ, ಮರಣಪತ್ರಗಳು ಅಗತ್ಯ ದಾಖಲೆಗಳಾಗಿವೆ. ಒಂದು ಮಗು ಹುಟ್ಟಿದ ಮಗುವನ್ನು ಶಾಲೆಗೆ ಸೇರಿಸಲು, ಆಧಾರ ಕಾರ್ಡ್ ಮಾಡಿಸಲು ಹಾಗು ಇನ್ನಿತರ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಬೇಕು. ಹೀಗಿರುವಾಗ ಈ ದಾಖಲೆಗಳ ಶೂಲ್ಕವನ್ನು ಸರ್ಕಾರ ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.