

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹಳಿಯಾಳ ರಸ್ತೆಯ ತಪೋವನದಲ್ಲಿ ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿಯವರ 116ನೇ ಜನ್ಮೋತ್ಸವ ಕಾರ್ಯಕ್ರಮವನ್ನು ಆ. 9ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಪ್ರಾರ್ಥನಾ ಯೋಗದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಉದ್ಭವ ಮಹಾರಾಜ ಹೈಬತ್ತಿಕರ್ ಅತಿಥಿಯಾಗಿ ಪಾಲ್ಗೊಲ್ಳುವರು. ಸೊಲ್ಲಾಪುರದ ಸುರೇಖಾ ಹೊಳಿಕಟ್ಟಿ ಉಪನ್ಯಾಸ ನೀಡುವರು. ಮಹಾತಪಸ್ವಿ ಪ್ರಧಾನ ಸೇವಕ ಬಲಭೀಮ ಜಿ, ಚೇರ್ಮನ್ ಆರ್.ಡಿ. ಭದ್ರನವರ ಅಧ್ಯಕ್ಷತೆ ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಪ್ರಭುಲಿಂಗ ನರ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.