ಶ್ರೀ ಚಂದ್ರಶೇಖರ ಸ್ವಾಮಿಗಳ ಜಯಂತ್ಯುತ್ಸವ

h23-shyandilyashrama
Published on

ಹುಬ್ಬಳ್ಳಿ: ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ವೇದಾಂತ ವಾಗೀಶ ಬ್ರಹ್ಮಲೀನ ಸದ್ಗುರು ಶ್ರೀ ಚಂದ್ರಶೇಖರ ಸ್ವಾಮಿಗಳ 90ನೇ ಜಯಂತ್ಯುತ್ಸವ ಹಾಗೂ ಶ್ರೀ ಬಗಳಾಂಬಾ ಮಹಿಳಾ ಮಂಡಳದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇಲ್ಲಿಯ ಶ್ಯಾಂಡಿಲ್ಯಾಶ್ರಮದಲ್ಲಿ ಭಾನುವಾರ ಜರುಗಿತು.

ಬೆಳಗ್ಗೆ ಬೆನಕಟ್ಟಿಯ ಶ್ರೀ ಮಲ್ಲಮಾಂಬೆ ಭಜನಾ ಮಂಡಳಿಯವರು ಶ್ರೀಮನ್ ನಿಜಗುಣ ಶಿವಯೋಗಿಗಳ ತತ್ವಪದಗಳನ್ನು ಹಾಡಿದರು. ಇಂಚಲದ ಸಾಧು ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸವದತ್ತಿಯ ಹಳಕಟ್ಟಿಯ ಶ್ರೀ ಶಿವಾನಂದ ಮಠದ ಶ್ರೀ ನಿಜಗುಣ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಸದ್ಗುರು ಶ್ರೀ ಚಂದ್ರಶೇಖರ ಸ್ವಾಮಿಗಳ ಮೂರ್ತಿಯ ತುಲಾಭಾರ ಕಾರ್ಯಕ್ರಮವನ್ನು ಕಮಲವ್ವ ಹಳೇಮನಿ ಅವರು ನಡೆಸಿಕೊಟ್ಟರು.

ನಾಗಶೆಟ್ಟಿಕೊಪ್ಪ, ಕೇಶ್ವಾಪೂರ, ಬೆಂಗೇರಿ, ಗೋಪನಕೊಪ್ಪ, ಬೆನಕನಕೊಪ್ಪ, ಬೆನಕೆಟ್ಟಿ ಸೇರಿ ಹಲವು ಗ್ರಾಮಗಳ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net