

ಹುಬ್ಬಳ್ಳಿ : ಕರ್ಮಯೋಗಿನಿ ಅಹಲ್ಯಾಬಾಯಿ ಹೊಳಕರ ಅವರ 300 ನೇ ಜನ್ಮದಿನವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಅಹಲ್ಯಾಬಾಯಿ ಅವರು ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರೊಬ್ಬ ದಿಟ್ಟ್ಟ ಮಹಿಳೆ. ಅವರ ತತ್ವ, ಆದರ್ಶಗಳು ಇಂದಿನ ಮಹಿಳೆಯರಿಗೆ ಮಾರ್ಗದರ್ಶನ ಎಂದು ಹೇಳಿದರು.
ರಾಷ್ಟ್ರೀಯ ಸೇವಿಕಾ ಸಮಾಜದ ಮುಖಂಡರಾದ ಸಂಧ್ಯಾ ದೀಕ್ಷಿತ್ ಹಾಗೂ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗಳ ಮಾತನಾಡಿ, ಭಗಿನಿ ಅಹಲ್ಯಾರವರು ಚಿಕ್ಕವರಿದ್ದಾಗಿನಿಂದಲೇ ಸಮಾಜ ಮತ್ತು ದೇಶದ ಮಹಿಳೆಯರಿಗೆ ಜಾಗೃತಿ ಮೂಡಿಸಿದವರು ಎಂದರು. ಕರ್ಮ ಯೋಗಿನಿ ಅಹಲ್ಯಾಬಾಯಿ ಹೊಳಕರ ಅವರ ಕುರಿತ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಅವಳಿ ನಗರದ ರಸ್ತೆಗೆ ಅಹಲ್ಯಾಬಾಯಿ ಹೋಳಕರ ಹೆಸರು ನಾಮಕರಣ ಮಾಡಲು ಮಹಾಪೌರರಿಗೆ ಮನವಿ ಸಲ್ಲಿಸಲಾಯಿತು.
ಮಹಾಪೌರ ರಾಮಪ್ಪ ಬಡಿಗೇರ, ಮಾಜಿ ಶಾಸಕಿ ಸೀಮಾ ಮಸೂತಿ, ರವಿ ದಂಡಿ, ರಾಜೇಶ್ವರಿ ಸಾಲಗಟ್ಟಿ, ಅಕ್ಕಮ್ಮ ಹೆಗಡೆ, ನಾಗರತ್ನ ಬಳ್ಳಾರಿ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ರಾಜು ಕಾಳೆ, ಮಂಜುನಾಥ ಕಾಟಕರ, ಮಾಲತಿ ಹುಲಿಕಟ್ಟಿ, ಪೂರ್ಣಿಮಾ ಶಿಂಧೆ, ರಾಮನಗೌಡ ಶೆಟ್ಟನಗೌಡ್ರು, ರಂಗಾ ಕಠಾರೆ, ಪ್ರವೀಣ ಪವಾರ, ರವಿ ನಾಯಕ ಹಾಗೂ ಇತರರು ಇದ್ದರು.