ಬಿರ್ಸಾ ಮುಂಡ ಜಯಂತಿ ಆಚರಣೆ

Oplus_0
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಿರ್ಸಾಮುಂಡ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಭಗವಾನ್ ಬಿರ್ಸಾ ಮುಂಡ ಅವರ 150ನೇ ಜನ್ಮದಿನ ಆಚರಿಸಲಾಯಿತು.

ಸಿಎಸ್‌ಐಆರ್-ಎನ್‌ಎಎಲ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿಜ್ಞಾನಿ ಶೋಭವತಿ ಮಾತನಾಡಿ, ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆಗಳಲ್ಲಿ ಶಿಕ್ಷಣವು ಸಮಗ್ರ ಅಭಿವೃದ್ಧಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಸಬಲೀಕರಣ ನಿರ್ಣಾಯಕವಾಗಿದೆ. ಇದು ವ್ಯಕ್ವತಿತ್ವ ನಿರ್ಮಾಣ ಮತ್ತು ಆಧುನಿಕ ಶಿಕ್ಷಣದೊಂದಿಗೆ ಸಂಪ್ರದಾಯಿಕ ಜ್ಞಾನದ ಏಕೀಕರಣಕ್ಕೆ ಒತ್ತು ನೀಡುತ್ತದೆ. ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ವಿದ್ಯಾರ್ಥಿಗಳನ್ನು ಸಂಕೀರ್ಣ ಜಗತ್ತಿಗೆ ಸಿದ್ಧಪಡಿಸುತ್ತದೆ ಎಂದು ತಿಳಿಸಿದರು.

ಸಿಆರ್‌ಪಿ ರೇಚಣ್ಣ, ಮುಖ್ಯ ಶಿಕ್ಷಕ ಕೆ. ಜಯಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗುವ ಅನೇಕ ಕಾರ್ಯಕ್ರಮಗಳನ್ನು ಎನ್‌ಎಎಲ್ ತಂಡವು ನಡೆಸಿಕೊಟ್ಟಿತು. ವಿನೂತನ ಮಾದರಿ, ಡ್ರೋನ್ ಬಳಕೆಯ ವಿಧಾನ ಅದರ ಉಪಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ವಿಜ್ಞಾನಿಗಳಾದ ನಾಯ್ಡು, ಶ್ವೇತಾ, ನವನೀತಾ, ಮಹೇಶ್ ಮುಖ್ಯ ಶಿಕ್ಷಕಿ ರಾಜೇಶ್ವರಿ, ಶಿಕ್ಷಕರಾದ ಉಮಾಶಂಕರ್, ರಾಜೇಂದ್ರ, ಸುಮಾ, ತುಳಸಿ, ವಿಜಯ, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net