ನಾಪತ್ತೆಯಾಗಿದ್ದ ಬಿರ್ಲಾ ಕಂಪನಿ ಅಧಿಕಾರಿ ಶವವಾಗಿ ಪತ್ತೆ

Crime Logo
Published on

ರಾಣೆಬೆನ್ನೂರ: ಕಳೆದ ಐದು ದಿನದ ಹಿಂದೆ ನಾಪತ್ತೆಯಾಗಿದ್ದ ತಾಲೂಕಿನ ಕುಮಾರಪಟ್ಟಣ ಬಿರ್ಲಾ ಕಂಪನಿ ಅಧಿಕಾರಿಯೊಬ್ಬ ನಲವಾಗಿಲ ಗ್ರಾಮದ ಬಳಿ ತುಂಗಭದ್ರಾ ನದಿ ಪಾತ್ರದಲ್ಲಿ ಶವವಾಗಿ ಬುಧವಾರ ಪತ್ತೆಯಾಗಿದ್ದಾರೆ.
ಬಿಹಾರದ ವಿಕಾಸ ಚಂದ್ರದೇವ ಮಿಶ್ರಾ (46) ಎಂಬುವರ ಶವ ಪತ್ತೆಯಾಗಿರುವುದು.
ಇವರು ಬಿರ್ಲಾ ಕಂಪನಿಯಲ್ಲಿ ಪಾವರ ಪ್ಲಾಂಟ್​ ವಿಭಾಗದಲ್ಲಿ ಅಸಿಸ್ಟಂಟ್​ ವೈಸ್​ ಪ್ರೇಸಿಡಿಂಟ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜು. 26ರಂದು ರಾತ್ರಿ 8 ಗಂಟೆಗೆ ಮನೆಯಿಂದ ಹೋದವರು ವಾಪಸ್​ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಕುಮಾರಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಕುಟುಂಬದವರು ಹಾಗೂ ಪೊಲೀಸರು ಹುಡುಕಿದರೂ ಪತ್ತೆಯಾಗಿರಲಿಲ್ಲ.
ಆದರೆ, ಬುಧವಾರ ಬೆಳಗ್ಗೆ ಅವರ ಶವ ಬಿರ್ಲಾ ್ಯಾಕ್ಟರಿಯಿಂದ ಕೂಗಳತೆ ದೂರದಲ್ಲಿರುವ ನಲವಾಗಿಲ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಪತ್ತೆಯಾಗಿದೆ. ಟನಾ ಸ್ಥಳಕ್ಕೆ ಪೊಲೀಸರು, ಆವರ ಕುಟುಂಬದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net