

ಮೈಸೂರು: ಪಕ್ಷಿ ಪ್ರೇಮಿ, ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಯಾದ ಗಿರಿ ಚಂದ್ರಶೇಖರ್ ಹಾಗೂ ವಿಪ್ರೋ ಕಂಪನಿಯ ತಂತ್ರಜ್ಞ ಕಶ್ಯಪ್ ಅವರು ಸೆರೆ ಹಿಡಿದಿರುವ ಅಪರೂಪದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿ ಅವರ ಜನ್ಮದಿನದ ನೆನಪಿನಲ್ಲಿ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಛಾಯಾಚಿತ್ರಕ್ಕೆ ಪಕ್ಷಿ ವೀಕ್ಷಕರಾದ ಕೆ.ಮನು ಮತ್ತು ವಿಜಯಲಕ್ಷ್ಮಿ ಅವರು ಚಾಲನೆ ನೀಡಿದರು. ಪಕ್ಷಿ ವೀಕ್ಷಿಕರಾದ ಶಿವಪ್ರಕಾಶ್, ಪಕ್ಷಿ ಪ್ರೇಮಿಗಳು ಇದ್ದರು.
ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ, ರಾಜ್ಯದ ನಾನಾ ಅರಣ್ಯಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳದ, ಉತ್ತರಖಾಂಡ ಅರಣ್ಯ ಪ್ರದೇಶಗಳಲ್ಲಿ ತೆಗೆದಿರುವ ಅಪರೂಪದ ಫೋಟೋಗಳ ಕಣ್ಮನ ಸೆಳೆಯುತ್ತಿವೆ. ಸ್ಪಾಟ್ ಬಿಲ್ಡ್ ಪೆಲಿಕಾನ್, ಗಾರ್ಗನೀ, ಬಾರ್ ಹೆಡಿಡ್ ಗೂಸ್, ನಾರ್ತನ್ ಶೋವೆಲರ್, ನಾರ್ತನ್ ಪಿಂಟೇಲ್, ಗ್ಲೂಸಿ ಐಬಿಸ್, ಉತ್ತರಖಂಡ್ ವ್ಯಾಪಿಯಲ್ಲಿ ಬರುವ ರೂಸ್ ಬೆಲಿಯಡ್ ವುಡ್ ಪೆಕ್ಕರ್, ಹಿಮಾಲಯನ್ ವುಡ್ ಪೆಕರ್, ಗ್ರೇಟರ್ ಎಲ್ಲೋನೇಪ್, ಲಿಸ್ಸರ್ ಯೆಲ್ಲೋ ನೆಪ್ ಇಲ್ಲಿವೆ.
ಕೇರಳ ಥಾಟೆಕಾಡ್‌ನ ಹಾಟರ್ ಸ್ಪಾಟೀಡ್ ವುಡ್ ಪೆರ್ಕ, ಗ್ರೇಟ್ ಬಾರ್ಬೆಟ್, ಗೋಲ್ಡನ್ ಥ್ರೋಟೆಡ್ ಬಾರ್ಬಟೆ, ಪರ್ಪಲ್ ಸನ್ ಬಡರ್, ಕ್ರಿಮ್ ಸನ್ ಬ್ಯಾಕಿಡ್ ಸನ್ ಬಡರ್, ಮಲಬಾರ್ ಸ್ಟಾರ್ ಲಿಂಗ್, ಹಿಮಾಲಯನ್ ಮೋನಲ್, ಕಲಿಜ್ ಫೀಸಂಟ್, ಕಲಿಜ್ (ಕಾಡು ಕೋಳಿ) ಸೇರಿದಂತೆ ಸುಮಾರು 180 ಫೋಟೋಗಳಲ್ಲಿ 170 ಪಕ್ಷಿಗಳ ಕಲರವನ್ನು ಕಾಣಬಹುದಾಗಿದೆ.