ಉಸ್ತಾದ್ ರಫೀಕ್ ಖಾನ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ

book new
Published on

ಬೆಳ್ತಂಗಡಿ: ಅಂತಾರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಜೀವನ ಚರಿತ್ರೆ, ವಿಜಯವಾಣಿ ಮುಖ್ಯ ಉಪಸಂಪಾದಕ ಶೇಣಿ ಮುರಳಿ ಬರೆದ ‘ಖಾನ್ ಕಾಂಪೌಂಡ್’ ಹಾಗೂ ಹರೀಶ್ ಶೆಟ್ಟಿ ಇಂಗ್ಲಿಷ್‌ನಲ್ಲಿ ಬರೆದ ‘ರೊಮ್ಯಾನ್ಸಿಂಗ್ ದ ಸಿತಾರ್’ ಪುಸ್ತಕಗಳನ್ನು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ವಿದ್ವಾಂಸ ಡಾ.ಎಸ್.ರಂಗನಾಥ್, ಸಂಸ್ಕೃತ ಚಿಂತಕಿ ಡಾ.ಜ್ಯೋತಿ ಶಂಕರ್, ವಿಶ್ರಾಂತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್, ಹೇಮಾವತಿ ವಿ.ಹೆಗ್ಗಡೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಅಮಿತ್ ಕುಮಾರ್, ಶ್ರದ್ಧಾ ಅಮಿತ್, ಉಸ್ತಾದ್ ರಫೀಕ್ ಖಾನ್, ಲೇಖಕರಾದ ಶೇಣಿ ಮುರಲಿ, ಹರೀಶ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net