ವಸತಿ ಶಾಲೆಯಾಗಲಿವೆ ಜೀವವೈವಿಧ್ಯ ತಾಣ, ಆವರಣಗಳಲ್ಲಿ ಕೃಷಿ ಹೊಂಡ ಕಾಮಗಾರಿ ಚುರುಕು ಮೀನುಗಾರಿಕೆ, ಮಳೆನೀರು ಸದ್ಬಳಕೆ ಉದ್ದೇಶ

1 bommavara
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಭವಿಷ್ಯದಲ್ಲಿ ವಸತಿ ಶಾಲೆಗಳ ಆವರಣ ಲ ತುಂಬಿದ ಸಸಿಗಳಿಂದ ಕಂಗೊಳಿಸಬೇಕು. ಸಸಿಗಳಲ್ಲಿ ಬೆಳೆದ ವಿವಿಧ ಜಾತಿಯ ಹಣ್ಣುಗಳನ್ನು ಮಕ್ಕಳಿಗೆ ನೀಡಬೇಕೆಂಬ ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಲ ದೊರಕುವ ದಿನಗಳು ಹತ್ತಿರವಾಗುತ್ತಿರುವ ನಡುವೆಯೇ ವಸತಿ ಶಾಲೆಗಳ ಆವರಣದಲ್ಲಿ ಕೃಷಿ ಹೊಂಡ ನಿರ್ಮಿಸುವ ಕನಸು ಸಾಕಾರದತ್ತ ಸಾಗಿದೆ.

ಹೌದು! ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಆವರಣದಲ್ಲಿ ಕೃಷಿಹೊಂಡ ನಿರ್ಮಾಣ ಚುರುಕುಗೊಂಡಿದೆ. ಹೊಂಡಗಳನ್ನು ವಿವಿಧ ಉದ್ದೇಶಕ್ಕೆ ಬಳಸುವ ಹಿನ್ನೆಲೆಯಲ್ಲಿ ಯೋಜನೆ ಸಿದ್ಧವಾಗಿದ್ದು, ಈಗಾಗಲೇ ನಾಲ್ಕೈದು ವಸತಿ ಶಾಲೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಎಲ್ಲ ಶಾಲೆಗಳಲ್ಲೂ ನಿರ್ಮಾಣಗೊಳ್ಳಲಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ ತಿಳಿಸಿದ್ದಾರೆ.

ಮೀನುಗಾರಿಕೆ ಕನಸು: ವಸತಿ ಶಾಲೆ ಆವರಣಗಳಲ್ಲಿ ಲೋದ್ಯಾನ ನಿರ್ಮಾಣ ಕನಸಿನೊಂದಿಗೆ ಆರಂಭವಾದ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವ ಯೋಜನೆಯೂ ಮಹತ್ವ ಪಡೆದಿದೆ. ವಸತಿ ಶಾಲೆ ಆವರಣದಲ್ಲಿ ಹರಿಯುವ ಮಳೆ ನೀರನ್ನು ಸಂಗ್ರಹಿಸಿ, ಲೋಧ್ಯಾನದ ಸಸಿಗಳಿಗೆ ಉಣಿಸುವುದು ಪ್ರಮುಖ ಉದ್ದೇಶವಾಗಿದೆ. ಜತೆಗೆ ಇದೇ ಹೊಂಡಗಳಲ್ಲಿ ಮೀನುಸಾಕಣೆ ಮಾಡುವುದು. ಆ ಮೀನುಗಳನ್ನೇ ಮಕ್ಕಳಿಗೆ ನೀಡುವುದು ಯೋಜನೆಯ ಮತ್ತೊಂದು ಕನಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋದ್ಯಾನ ಯೋಜನೆ: ವಸತಿ ಶಾಲೆ ಆವರಣಗಳಲ್ಲಿ ಲೋದ್ಯಾನ ನಿರ್ಮಿಸುವ ಇಲಾಖೆ ಕನಸಿಗೆ ಎನ್‌ಜಿಒ ಸಂಸ್ಥೆಯೊಂದು ಸಾಥ್ ನೀಡಿದೆ. ಈಗಾಗಲೇ ಹಲವು ಶಾಲೆಗಳಲ್ಲಿ ವಿವಿಧ ಜಾತಿಯ ಸಸಿಗಳು ಸಲು ನೀಡಲು ಆರಂಭಿಸಿವೆ. ಕರೊನಾ ಕಾರಣದಿಂದ ವಸತಿ ಶಾಲೆಗಳು ಆರಂಭವಾಗಿಲ್ಲ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ವಿವಿಧ ಬಗೆಯ ಹಣ್ಣುಗಳನ್ನು ಸವಿಯುವ ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಶಾಲೆಗಳಲ್ಲಿ 400ಕ್ಕೂ ಹೆಚ್ಚು ಹಣ್ಣಿನ ಗಿಡ ನೆಡಲಾಗಿದೆ. ಕೇವಲ ನಾಲ್ಕೈದು ತಿಂಗಳ ಹಿಂದೆ ಆರಂಭವಾದ ಯೋಜನೆಗೆ ಈಗಾಗಲೇ ಲ ದೊರಕುತ್ತಿದೆ, ಹಲವು ಸಸಿಗಳು ಈಗಾಗಲೇ ಸಲು ನೀಡಲು ಅರಂಭಿಸಿವೆ, ಸಪೋಟ, ಅಂಟಿಲ್ಲದ ಹಲಸು, ಚೇಪೆ, ಮಾವು, ರಾಮಲ, ಸ್ಟಾರ್‌‌ರೆೆಟ್ ಗಿಡಗಳಲ್ಲಿ ಲಕಚ್ಚಿವೆ.

ಇದೊಂದು ಉತ್ತಮ ಯೋಜನೆ, ವಸತಿ ಶಾಲೆಗಳಲ್ಲಿ ಲೋದ್ಯಾನ ನಿರ್ಮಾಣ ಕನಸಿನೊಂದಿಗೆ ಆರಂಭವಾದ ಯೋಜನೆಗೆ ಲ ದೊರಕುತ್ತಿದೆ. ಇದೇ ರೀತಿ ಎಲ್ಲ ವಸತಿ ಶಾಲೆಗಳನ್ನೂ ನಿರೀಕ್ಷಿಸುತ್ತೇವೆ, ಇಂಥ ವಿನೂತನ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿರಬೇಕು. ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ ವಸತಿ ಶಾಲೆ ಆವರಣಗಳನ್ನು ಜೀವವೈವಿಧ್ಯ ತಾಣವಾಗಿಸುವ ಕನಸು ಸಾಕಾರಗೊಳ್ಳುತ್ತಿದೆ. ಮೀನು ಸಾಕಣೆ, ಮಳೆ ನೀರು ಸದ್ಬಳಕೆ ಹಾಗೂ ಸಸಿಗಳಿಗೆ ನೀರುಣಿಸುವ ಉದ್ದೇಶದೊಂದಿಗೆ ಕೃಷಿ ಹೊಂಡ ನಿರ್ಮಿಸಲಾಗುತ್ತಿದೆ. ಹನುಮಂತರಾಯಪ್ಪ, ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net