ಜೀವ ಸಂಕುಲ ಸಂರಕ್ಷಣೆ ಬಹುಮುಖ್ಯ

11 gkp 06
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಅಂತಾಷ್ಟ್ರೀಯ ಸಮ್ಮೇಳನ ನಡೆಯಿತು. ಡಾ.ಜಿ.ಎಂ.ದೇವಗಿರಿ, ಡಾ.ಕೆಂಚಾರೆಡ್ಡಿ , ಡಾ.ಬಿ.ಜಿ.ನಾಯಕ್ ಇತರರು ಇದ್ದರು.
Published on

ಗೋಣಿಕೊಪ್ಪ: ಶಿವಮೊಗ್ಗದ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಇತ್ತೀಚೆಗೆ ಜೀವಸಂಕುಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ಅವುಗಳ ಪ್ರಸ್ತುತತೆ ಮತ್ತು ಭವಿಷ್ಯದ ನಿರೀಕ್ಷೆಗಳ ಕುರಿತು 2 ದಿನಗಳ ಅಂತಾರಾಷ್ಟ್ರ್ರೀಯ ಸಮ್ಮೇಳನ ನಡೆಯಿತು.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಮಾತನಾಡಿ, ಸಮ್ಮೇಳನದಲ್ಲಿ ದೇಶ, ವಿದೇಶಗಳ ಸುಮಾರು 150 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸ್ವಿಡ್ಜರ್‌ಲ್ಯಾಂಡ್, ಯುಕೆ, ಜರ್ಮನಿ, ಫಿಲಿಫೈನ್ಸ್, ಇಟಲಿ ದೇಶಗಳಿಂದ ವಿಜ್ಞಾನಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸುವುದು ಸಮ್ಮೇಳನದ ಮೂಲ ಉದ್ದೇಶವಾಗಿದೆ. ಅಲ್ಲದೇ, ಅತ್ಯಂತ ಪ್ರಯೋಜನಕಾರಿಯೂ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಜೀವ ಸಂಕುಲ ಸಂರಕ್ಷಣೆ ಬಹುಮುಖ್ಯವಾಗಿದೆ. ಈ ಬಗ್ಗೆ ಪರಸ್ಪರ ವಿಚಾರ ವಿನಿಮಯದಿಂದ ಸಾಕಷ್ಟು ವಿಷಯಗಳನ್ನು ಚರ್ಚೆ ನಡೆಸಬಹುದಾಗಿದೆ ಎಂದರು.

ಸಮ್ಮೇಳನದಲ್ಲಿ ಪ್ರಮುಖವಾಗಿ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ಮಾನವ ವನ್ಯಪ್ರಾಣಿ ಸಂಘರ್ಷ ಸೇರಿದಂತೆ ಇತರ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಶಿವಮೊಗ್ಗದ ರಿಜಿಸ್ಟ್ರಾರ್ ಡಾ.ಶಶಿಧರ್ ಹಾಗೂ ನಿವೃತ್ತ ಉಪ ಕುಲಪತಿ ಡಾ.ಎಂ.ಕೆ.ನಾಯಕ್ ವಿಚಾರಗೋಷ್ಠಿ ನಡೆಸಿಕೊಟ್ಟರು. ಆದಾಯ ಹೆಚ್ಚಿಸಿಕೊಳ್ಳಲು ಕೈಗೊಳ್ಳಬಹುದಾದ ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ಉಪ ಕಸುಬುಗಳ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಕ್ಷೇತ್ರದ ಪರಿಣಿತ ವಿಜ್ಞಾನಿಗಳಿಂದ ವಿಷಯ ಮಂಡನೆ ಹಾಗೂ ಸಂವಾದ ನಡೆಯಿತು.

ಕಾರ್ಯಕ್ರಮದ ಸಂಚಾಲಕ, ಸಹ ಪ್ರಾಧ್ಯಾಪಕರಾದ ಡಾ.ಬಿ.ಎನ್.ಸತೀಶ್, ಡಾ.ಕೆಂಚಾರೆಡ್ಡಿ, ಡಾ.ಬಿ.ಜಿ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net