ವಿಮಾನನಿಲ್ದಾಣದಲ್ಲಿ ಜೈವಿಕ ತ್ಯಾಜ್ಯ ಸಂಗ್ರಹಕ್ಕೆ ಕಸದ ಬುಟ್ಟಿ

Biowaste-Bins
Published on

ಬೆಂಗಳೂರು: ವಿಮಾನ ಪ್ರಯಾಣಿಕರು ಬಳಸುವ ಮಾಸ್ಕ್​, ಪರ್ಸನಲ್​ ಪ್ರೊಟೆಕ್ಟಿವ್​ ಎಕ್ಯೂಪ್​ಮೆಂಟ್​ (ಪಿಪಿಇ), ೇಸ್​ ಶೀಲ್ಡ್​ಗಳ ಸುರತ ವಿಲೇವಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಜೈವಿಕ ತ್ಯಾಜ್ಯದ ಕಸದ ಡಬ್ಬಿ ಅಳವಡಿಸಲಾಗಿದೆ.

ಕರೊನಾ ಸೋಂಕಿನಿಂದ ಸಂರಸಿಕೊಳ್ಳಲು ವಿಮಾನ ಪ್ರಯಾಣಿಕರು ಬಳಸುವ ವಸ್ತುಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದನ್ನು ತಪ್ಪಿಸಲು ಬಿಐಎಎಲ್​ ಕ್ರಮ ಕೈಗೊಂಡಿದೆ. ಕೆಐಎನಲ್ಲಿ ಪ್ರತಿದಿನಕ್ಕೆ 800ರಿಂದ 1 ಸಾವಿರ ಕೆ.ಜಿ. ಜೈವಿಕ ತ್ಯಾಜ್ಯ ಸಂಗ್ರಹಿಸುತ್ತದೆ. ಆ ಜೈವಿಕ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಲು ಹಳದಿ ಬಣ್ಣದ ಕಸದ ಡಬ್ಬಿ ಇರಿಸಲಾಗಿದೆ.

ವಿಮಾನನಿಲ್ದಾಣದ 139 ಕಡೆಗಳಲ್ಲಿ ಈ ಕಸದ ಡಬ್ಬಿಗಳನ್ನು ಇರಿಸಲಾಗಿದ್ದ, ಪ್ರಯಾಣಿಕರು ಮತ್ತು ಸಿಬ್ಬಂದಿ ತಾವು ಬಳಸಿದ ಸೋಂಕಿನಿಂದ ರಸುವ ವಸ್ತುಗಳನ್ನು ಆ ಡಬ್ಬಿಯಲ್ಲೇ ಹಾಕುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net