ಟೊಮ್ಯಾಟೊಗೆ ಬಿಂಗಿ ಬಾಧೆ

tomato
Published on

ಸಂಕಷ್ಟದಲ್ಲಿ ರೆತರು,ಸುಗ್ಗಿಯಲ್ಲಿ ಇಳುವರಿ ಕುಠಿಂತ, ಬಿಳಿನೊಣ ಕಾಟ

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಭೂಮಿಯಲ್ಲಿ ಪೋಷಕಾಂಶ ಕೊರತೆ, ಹವಾಮಾನ ವೆಪರೀತ್ಯ, ಬಿತ್ತನೆ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಟೊಮ್ಯಾಟೊ ಬೆಳೆಗೆ ವಿವಿಧ ರೀತಿಯ ರೋಗಗಳು ತಗುಲಿ, ಇಳುವರಿ ಕುಂಠಿತಗೊಂಡಿರುವುದು ರೈತರನ್ನು ಸಂಕಷ್ಟಕ್ಕೆ ಸಲುಕಿಸಿದೆ.
ಜಿಲ್ಲೆಯಲ್ಲಿ 96,805 ಹೆಕ್ಟೇರ್​ ತೋಟಗಾರಿಕೆ ಪ್ರದೇಶವಿದ್ದು, ಆ ಪೆಕಿ 48,629 ಹೆಕ್ಟೇರ್​ ಪ್ರದೇಶದಲ್ಲಿ ಹಣ್ಣು, 40,571 ಹೆಕ್ಟೇರ್​ ಪ್ರದೇಶದಲ್ಲಿ ತರಕಾರಿ ಬೆಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಟೊಮ್ಯಾಟೊ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸುಮಾರು 25 ಸಾವಿರ ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಟೊಮ್ಯಾಟೊಗೆ ಎಲೆ ಮುದುಡು ನಂಜುರೋಗ ಮತ್ತು ದುಂಡಾಣು ಸೊರಗು ರೋಗಕ್ಕೆ ತುತ್ತಾಗಿದ್ದು, ಬಹುತೇಕ ತೋಟಗಳು ರೋಗ ಉಲ್ಬಣಿಸಿದೆ.
ಅಂಗಮಾರಿ, ನುಡಿ ರೋಗ, ಬಿಳಿ ನೋಣದ ಹಾವಳಿ, ಎಲೆ ಮುದುರು ರೋಗ ತಗಲುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಎಲೆ ದುಂಡಾಣು (ಬಿಂಗಿ) ರೋಗ ಹೆಚ್ಚಾಗಿದ್ದು, ರೆತರು ಎಷ್ಟೇ ನಿರ್ವಹಣೆ ಮಾಡಿ, ನೀರು, ರಸಗೊಬ್ಬರ, ಕೊಟ್ಟಿಗೆ ಗೊಬ್ಬರ ನೀಡುತ್ತಿದ್ದರೂ ರೋಗ ಹತೋಟಿಗೆ ಬಾರದಂತಾಗಿದೆ.
ಉತ್ತಮ ಬೆಳೆಯಾದರೆ ಒಂದು ಎಕರೆಗೆ 25 ರಿಂದ 30 ಟನ್​ ಟೊಮ್ಯಾಟೊ ಇಳುವರಿ ಪಡೆಯಬಹುದು. ಆದರೆ, ಎಲೆಮುದುಡು ರೋಗದಿಂದಾಗಿ ಇಳುವರಿ ಕುಸಿದಿದ್ದು, ಪ್ರತಿ ಎಕರೆಗೆ ಕೇವಲ 10 ಟನ್​ ಇಳುವರಿ ಬರಬಹುದು ಎಂದು ಅಂದಾಜಿಸಲಾಗಿದೆ. ರೋಗ ಪೀಡಿತ ಸಸಿಗಳನ್ನು ನಾಟಿ ಮಾಡುವುದು. ಬಿಳಿ ನೊಣದ ಸಂತತಿಗೆ ಅನುಕೂಲಕರ ವಾತಾವರಣದಿಂದ ರೋಗವು ಹೆಚ್ಚಾಗುತ್ತಿದೆ. ರೋಗಪೀಡಿತ ಎಲೆಗಳು ಚಿಕ್ಕದಾಗಿ ಹಾಗೂ ಹಳದಿ ಮಿಶ್ರಿತ ಹಸಿರು ಭಾಗ ಹೊಂದಿರುತ್ತವೆ. ಎಲೆಗಳು ಪೊದೆ ಆಕಾರದಲ್ಲಿ ಮೇಲ್ಮುಖವಾಗಿ ಮುದುರಿಕೊಂಡಿರುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿ, ಸರಿಯಾಗಿ ಹೂವು ಮತ್ತು ಕಾಯಿ ಬಿಡುವುದಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.


ತಜ್ಱರ ಶಿಫಾರಸಿನಂತೆ ಜೌಷಧ ಸಿಂಪಡಿಸಿ: ಸಸಿ ನಾಟಿ ಮಾಡುವ ಮುನ್ನ ನೆಲಾನ್​ ಪರದೆ ಬಳಸಬೇಕು. ಟೊಮ್ಯಾಟೊ ತೋಟದ ಸುತ್ತಲೂ ಎರಡರಿಂದ ನಾಲ್ಕು ಸಾಲು ಜೋಳ ಬೆಳೆಯಬೇಕು. ರೋಗಪೀಡಿತ ಸಸಿಗಳನ್ನು ಕಿತ್ತು ಸುಡಬೇಕು. ಪ್ರತಿ ಎಕರೆಗೆ 10 ಹಳದಿ ಅಂಟು ಪಟ್ಟಿ ಕಟ್ಟುವ ಮೂಲಕ ರೋಗ ನಿಯಂತ್ರಿಸಬಹುದು ಎಂದು ಕಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ರಾಲಸ್ಟೋನಿಯಾ ಸೋಲನೇಶೀಯರಮ್​ ಎಂಬ ದುಂಡಾಣುವಿನಿಂದ ಸೊರಗು ರೋಗ ಹರಡುತ್ತದೆ. ಮೊದಲಿಗೆ ಎಲೆಗಳು ಬಾಡುತ್ತವೆ. ಅತಿ ಬೇಗನೆ ಗಿಡಗಳು ಒಣಗುತ್ತವೆ. ರೋಗಕ್ಕೆ ತುತ್ತಾದ ಕಾಂಡವನ್ನು ಸೀಳಿದರೆ ಕಂದು ಬಣ್ಣ ಕಂಡುಬರುತ್ತದೆ. ಸೊರಗು ರೋಗ ಪೀಡಿತ ಪ್ರದೇಶದಲ್ಲಿ ಬದನೆ ಮೆಣಸಿನಕಾಯಿ ದೊಡ್ಡಮೆಣಸಿನ ಕಾಯಿ ಬೆಳೆಯುವ ಮೂಲಕ ಬೆಳೆ ಪರಿವರ್ತನೆ ಮಾಡಬೇಕು. ಇದರಿಂದಾಗಿ ರೋಗಗಳನ್ನು ತಡೆಗಟ್ಟಬಹುದು, ತರು ಶಿಾರಸ್ಸು ಮಾಡಿದ ಔಷಧಗಳನ್ನು ಕಾಲಕಾಲಕ್ಕೆ ಸಿಂಪಡಣೆ ಮಾಡುವುದರಿಂದ ಇಳುವರಿ ಪಡೆಯಬಹುದು ಎಂದು ತಿಳಿಸಿದ್ದಾರೆ.


ತೋಟಗಳ ಪರಿಶೀಲನೆ: ನಗರದ ಕಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಹಲವು ರೆತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಶೇ.60&80 ಬೆಳೆಗೆ ಬಿಳಿ ನೊಣದ ಹಾವಳಿ ಕಂಡುಬಂದಿದ್ದು, ರೋಗದ ಹತೋಟಿಗೆ ಕಾಲ ಕಾಲಕ್ಕೆ ರೆತರು ಕೆಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೋಗ ನಿಯಂತ್ರಿಸುವುದೇ ಸವಾಲು: ಸುಗ್ಗಿಯಲ್ಲಿ ಮಾರುಕಟ್ಟೆಗೆ ಪ್ರತಿ ದಿನ 30,000ಕ್ಕೂ ಹೆಚ್ಚು ಟನ್​ ಟೊಮ್ಯಾಟೊ ಆವಕ ಆಗುತ್ತಿತ್ತು, ಆದರೆ ಈ ಬಾರಿ ಬಿಸಿಲಿನ ತಾಮಪಮಾನ ಹೆಚ್ಚಾಗಿ ಸಸಿ ನಾಟಿ ಮಾಡಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಸುರಿದ ಅಲ್ಪಸ್ವಲ್ಪ ಮಳೆಗೆ ಸಸಿಗಳನ್ನು ನಾಟಿ ಮಾಡಿದವರು ರೋಗಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಈಗ ಇಳುವರಿ ಸಿಗದೆ ಇರುವುದು ಸಂಕಷ್ಟಕ್ಕೆ ಎದುರಾಗಬೇಕಾಗುತ್ತದೆ ಎಂದು ಕಿರುವಾರ ರೆತ ಚಂದ್ರಶೇಖರ್​ ಬೇಸರ ವ್ಯಕ್ತಪಡಿಸಿದ್ದಾರೆ.


ನಾಲ್ಕೆದು ವರ್ಷಗಳಿಂದ ಟೊಮ್ಯಾಟೊ ಬೆಳೆಗೆ ನಾನಾ ರೀತಿಯ ರೋಗಗಳು ತಗುಲುತ್ತಿವೆ. ಇದನ್ನು ನಿಯಂತ್ರಣ ಮಾಡಲು ಸಾಧ್ಯ ವಾಗುತ್ತಿಲ್ಲ, ಹಾಕಿದ ಬಂಡವಾಳ ಪಡೆಯುವುದು ಕಷ್ಟವಾಗುತ್ತಿದೆ.
ವರದಪ್ಪ ರೆತ, ಅಮ್ಮೇರಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net