ವಿಶಾಖಪಟ್ಟಣಂನಲ್ಲಿ ಬಿಂದು ಫ್ಯಾಕ್ಟರಿ ಔಟ್‌ಲೆಟ್ ಶುಭಾರಂಭ - ಎಲ್ಲ ಉತ್ಪನ್ನ ಒಂದೇ ಸೂರಿನಡಿ ಲಭ್ಯ - ವಿಸ್ತರಣಾ ಯೋಜನೆ

PTR_1 JAN_2
Published on

ಪುತ್ತೂರು: ಪ್ರತಿಷ್ಠಿತ ತಂಪು ಪಾನೀಯ ತಯಾರಿಕಾ ಸಂಸ್ಥೆ ಬಿಂದು ಫ್ಯಾಕ್ಟರಿಯ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ೧೯ನೇ ಬಿಂದು ಫ್ಯಾಕ್ಟರಿ ಔಟ್‌ಲೆಟ್ ಡಿ.೨೬ರಂದು ವಿಶಾಖಪಟ್ಟಣಂ ದ್ವಾರಕಾ ಬಸ್ ಸ್ಟೇಷನ್ ಸ್ಟಾಲ್ ನಂಬರ್ ೫ರಲ್ಲಿ ಶುಭಾರಂಭಗೊಂಡಿತು.

ವಿಶಾಖಪಟ್ಟಣಂ ಡೆಪ್ಯೂಟಿ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಅಽಕಾರಿ ಬಿ. ಅಪ್ಪಾಲ ನಾಯ್ಡು ಔಟ್‌ಲೆಟ್ ಉದ್ಘಾಟಿಸಿದರು. ಮೇಘಾ -ಟ್ ಪ್ರೊಸೆಸ್ಸಿಂಗ್ ಬಿಸಿನೆಸ್ ಹೆಡ್ ದೇವರಾಜ್, ಅಂಧ್ರ ಪ್ರದೇಶ ರಾಜ್ಯ ಮುಖ್ಯಸ್ಥರಾದ ಶಿವರಾಮ ಪ್ರಸಾದ್, ಸುಬ್ಬುರಾಯ ಹಾಗೂ ನಾಗೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಗ್ರಾಹಕರ ನೆಚ್ಚಿನ ಸ್ವದೇಶಿ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಂಸ್ಥೆಯು ಪುತ್ತೂರು ತಾಲೂಕು ನರಿಮೊಗರುವಿನಲ್ಲಿ ೨೦೦೦ರಿಂದ ಸ್ಥಳೀಯ ಜನರಿಗೆ ಉದ್ಯೋಗ ದೃಷ್ಟಿಯಿಂದ ಸ್ಥಾಪನೆಗೊಂಡಿದೆ. ಬಿಂದು ಬ್ರಾಂಡ್‌ನ ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು ಸಿಪ್ ಆನ್ ಬ್ರಾಂಡ್‌ನ ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, -ಝ್‌ನ್ ಬ್ರಾಂಡ್‌ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ನಾಕ್ ಅಪ್ ಬ್ರಾಂಡ್‌ನ ಸ್ನಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ, ಸುಮಾರು ೫೦ಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ದಕ್ಷಿಣ ಭಾರತದ್ಯಾಂತ ಸುಮಾರು ೫ಲಕ್ಷ ಮಳಿಗಳಲ್ಲಿ ಬಿಂದು ಉತ್ಪನ್ನಗಳು ದೊರಕುತ್ತಿವೆ.

ಬಿಂದು ಫ್ಯಾಕ್ಟರಿ ಔಟ್‌ಲೆಟ್ ಮೂಲಕ ಫ್ಯಾಕ್ಟರಿಯ ಎಲ್ಲ ಉತ್ಪನ್ನಗಳನ್ನು ಒಂದೇ ಸೂರಿನಡಿ ವಿತರಿಸುವ ಯೋಜನೆ ಹಮ್ಮಿಕೊಂಡಿದೆ. ಈ ಅರ್ಥಿಕ ವರ್ಷದಲ್ಲಿ ೫೦ ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಹಾಗೂ ಮುಂಬರುವ ೫ ವರ್ಷಗಳಲ್ಲಿ ೫೦೦ ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net