ಒಂದೇ ಸೂರಿನಡಿ ಭಾರತೀಯ ಶೈಲಿಯ ತಿಂಡಿ, ಪಾನೀಯ - ಬೆಂಗಳೂರಿನಲ್ಲಿ ಬಿಂದು ೭ನೇ ಔಟ್‌ಲೆಟ್ ಉದ್ಘಾಟನಾ ಸಮಾರಂಭದಲ್ಲಿ ಸುಶೀಲ್ ವೈದ್ಯ ಮಾಹಿತಿ

PTR_18 MAY_4
Published on

ಪುತ್ತೂರು: ಗ್ರಾಹಕರ ಮೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯವಿದೆ ಎಂದು ಬಿಂದು ಸಂಸ್ಥೆಯ ಸಿಇಒ ಸುಶೀಲ್ ವೈದ್ಯ ಹೇಳಿದರು.

ಬೆಂಗಳೂರಿನ ಬನಶಂಕರಿಯಲ್ಲಿ ಬಿಂದುವಿನ ೭ನೇ ಫ್ಯಾಕ್ಟರಿ ಔಟ್‌ಲೆಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏ ರೇಟೆಡ್ ಪಾನೀಯಗಳು, ಸಿಪ್ ಆನ್, ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ಫ್ರೂಝಾನ್ ಬ್ರಾಂಡ್ನ ಫಿಝ್ ಸಹಿತ ಹಣ್ಣಿನ ಮೂಲದ ಪಾನೀಯ, ಸ್ನ್ಯಾಕ್, ಕುರುಕಲು ಚಿಪ್ಸ್ ಇತ್ಯಾದಿ ಸುಮಾರು ೫೦ಕ್ಕೂ ಅಽಕ ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದಕ್ಷಿಣ ಭಾರತಾದ್ಯಂತ ಸುಮಾರು ೫ ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ಲಭ್ಯವಿದೆ. ನಮ್ಮ ಎಲ್ಲ ಉತ್ಪನ್ನಗಳು ಬಿಂದು ಫ್ಯಾಕ್ಟರಿ ಔಟ್‌ಲೆಟ್‌ನಲ್ಲಿ ಒಂದೇ ಸೂರಿನಡಿ ದೊರೆಯುತ್ತದೆ ಎಂದರು.

ಸಂಸ್ಥೆಯ ೭ನೇ ಫ್ಯಾಕ್ಟರಿ ಔಟ್‌ಲೆಟ್ಟನ್ನು ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ ನಿರ್ದೇಶಕಿ ಮೇಘಾಶಂಕರ್ ಇತ್ತೀಚೆಗೆ ಉದ್ಘಾಟಿಸಿದರು. ಮೇಘಾಫ್ರೂಟ್ ಪ್ರಾಸೆಸಿಂಗ್ ಲಿಮಿಟೆಡ್ ನಿರ್ದೇಶಕ ಮನಸ್ವಿತ್ ಶಂಕರ್, ನ್ಯಾಷನಲ್ ಕಮರ್ಷಿಯಲ್ ಬ್ರಾಂಡಿAಗ್ ಮ್ಯಾನೇಜರ್ ಹರಿಪ್ರಸಾದ್, ಬಿಜಿನೆಸ್ ಹೆಡ್ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net