

ಭಟ್ಕಳ: ತಾಲೂಕು ಮಟ್ಟದ ಪದವಿ-ಪೂರ್ವ ಕಾಲೇಜುಗಳ ಕಬ್ಬಡ್ಡಿ ಪಂದ್ಯಾವಳಿಯು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಂಯೋಜಕತ್ವದಲ್ಲಿ ಸಂಪನ್ನಗೊಂಡಿತು.
ಇಲ್ಲಿನ ರೋಷನಿ ಆಡಿಟೋರಿಯಂ ಒಳಾಂಗಣದಲ್ಲಿ ಪಂದ್ಯಗಳು ನಡೆದವು. ತಾಲೂಕಿನ ಒಟ್ಟು 9 ಪದವಿ ಪೂರ್ವ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಬೀನಾ ವೈದ್ಯ ಪದವಿ ಪೂರ್ವ ಬಾಲಕರ ತಂಡವು ಅಂಜುಮಾನ್ ಪದವಿ-ಪೂರ್ವ ಬಾಲಕರ ತಂಡದ ವಿರುದ್ಧ ಜಯ ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಬಾಲಕಿಯರ ವಿಭಾಗದ ಫೈನಲ್ನಲ್ಲಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜ್ ಬಾಲಕಿಯರು ಆರ್ಎನ್ಎಸ್ ತಂಡವನ್ನು ಮಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.