ಬಿಲ್ವ ಮಂದಿರದಲ್ಲಿ ಸ್ವಚ್ಛತಾ ಅಭಿಯಾನ

Untitled design (1)
Published on

ರಾಯಚೂರು: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ನಗರದ ಕೃಷ್ಣದೇವರಾಯ ಕಾಲನಿಯಲ್ಲಿರುವ ಬಿಲ್ವ ಮಂದಿರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಮತ್ತು ಬಡಾವಣೆಯ ಜನರು ದೇವಸ್ಥಾನದ ಪ್ರಾಕಾರ ಮತ್ತು ಆವರಣ ಸ್ವಚ್ಛಗೊಳಿಸಿದರು. ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಬಡಾವಣೆ ನಿವಾಸಿಗಳಾದ ಎಚ್.ವೆಂಕಟೇಶ, ಮನೋಹರ್, ಬೂದೆಪ್ಪ, ಶರಣಪ್ಪ ಮಾಸ್ತರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net