ಬಿಲ್ಲವ ಸೇವಾ ಸಂಘದ ವಿರುದ್ಧ ಅವಾಚ್ಯ ನಿಂದನೆ; ಕ್ರಮಕ್ಕೆ ಆಗ್ರಹ

udp-24-sp manavi
Published on

ಉಡುಪಿ: ಬನ್ನಂಜೆ ಬ್ರಹ್ಮಶ್ರೀ ನಾರಾಯಣಗುಗಳ ಮಂದಿರದಲ್ಲಿ ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ಜ.22ರಂದು ಬೆಳಗ್ಗೆ ಶ್ರೀರಾಮ ದೇವರ ಪ್ರತಿಷ್ಠೆ ದಿನ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಪೂರ್ವಾಗ್ರಹ ಪೀಡಿತ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸೇವಾ ಸಂಘ ವಿರುದ್ಧ ಅವಾಚ್ಯ ನಿಂದನೆ ಮಾಡಿ ವಿಡಿಯೋ ಪೋಸ್ಟ್​ ಮಾಡಿದ್ದು, ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಂಘ ಅಧ್ಯಕ್ಷ ಮಾಧವ ಬನ್ನಂಜೆ ಆಗ್ರಹಿಸಿದರು.

ಬಿಲ್ಲವ ಸೇವಾ ಸಂಘ ವಿರುದ್ಧ ಅವಾಚ್ಯ ನಿಂದನೆ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಡಾ. ಕೆ. ಅರುಣ್​, ವಿಡಿಯೋ ಪರಿಶೀಲನೆ ನಡೆಸಲಾಗುವುದು. ಸಂಘಟನೆ ಅಥವಾ ವ್ಯಕ್ತಿಗತ ಆರೋಪವಿದ್ದರೆ ಮಾನನಷ್ಟ ಮೊಕದ್ದಮೆ ಹೂಡಹುದು. ಸಾಮಾಜಿಕ ಸಾಮರಸ್ಯ ಹದಗೆಡಿಸುವ ಅಂಶಗಳಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂದ ಕಾರ್ಯದರ್ಶಿ ಶಶಿಧರ ಅಮೀನ್​, ಪ್ರಮುಖರಾದ ಆನಂದ ಪೂಜಾರಿ, ಪ್ರವಿಣ್​ ಸುವರ್ಣ, ಗಿರಿರಾಜ್​, ಗ್ರಾಪಂ ಸದಸ್ಯ ಲಕ್ಷ$್ಮಣ ಅಂಬಲಪಾಡಿ, ಉದಯ ಪೂಜಾರಿ, ಪೂರ್ಣಿಮಾ ಅಂಚನ್​, ರಾವೇಂದ್ರ ಅಮೀನ್​, ಗಣೇಶ್​ ಗುಂಡಿಬೈಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net