

ಕುಶಾಲನಗರ:
ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಸತ್ಪçಜೆಗಳಾಗಿ ರೂಪಿಸಬೇಕೆಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕರೆ ಕೊಟ್ಟರು.
ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಕುಶಾಲನಗರದಲ್ಲಿ ಭಾನುವಾರ ನಡೆದ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಡಿಮೆ ಜನಸಂಖ್ಯೆ ಹೊಂದಿರುವ ಬಿಲ್ಲವ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊAಡ ಸಮಾಜವಾಗಿದೆ. 1924ರಲ್ಲಿ ನಾರಾಯಣ ಗುರುಗಳು ಬಿಲ್ಲವ ಸಮಾಜದ ಶ್ರೇಯೋಭಿವೃದ್ದಿಗೆ ಕೊಟ್ಟ ಕರೆಯಂತೆ ಶಿಕ್ಷಣದಿಂದ ಸಂಘಟಿತರಾಗಬೇಕು. ಸಂಘಟನೆಯಿAದ ಶಕ್ತಿಶಾಲಿಗಳಾಗಬೇಕು. ವಿಶೇಷವಾಗಿ ಬಿಲ್ಲವರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಬೇಕು ಎಂದರಲ್ಲದೆ ಬಿಲ್ಲವ ಸಮಾಜದ ಅಭಿವೃದ್ದಿಗೆ ಪೂರಕವಾಗುವಂತೆ ಕುಶಾಲನಗರದಲ್ಲಿ ಒಂದಷ್ಟು ಭೂಮಿಯನ್ನು ಸರ್ಕಾರದಿಂದ ನೀಡುವ ಮೂಲಕ ಸಹಕರಿಸಬೇಕೆಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಡಾ. ಮಂತರ್ ಗೌಡ ಅವರಲ್ಲಿ ಅಹವಾಲು ಇಟ್ಟರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಬಿಲ್ಲವ ಸಮಾಜದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು.
ಕುಶಾಲನಗರ ವ್ಯಾಪ್ತಿಯಲ್ಲಿ ಲಭ್ಯವಿರುವ ಕಡೆ ಸೂಕ್ತ ಭೂಮಿಯನ್ನು ನೀಡುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು.
ಸಂಘ ಸಂಸ್ಥೆಗಳಿಗೆ ನಿವೇಶನ ಅಥವಾ ಭೂಮಿ ನೀಡುವಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಜತೆ ಚರ್ಚಿಸಿ ಬಗೆಹರಿಸಬೇಕೆಂದು ಹರಿಪ್ರಸಾದ್ ಅವರಲ್ಲಿ ವಿನಂತಿಸಿದರು.
ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿದರು. ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್, ಗೌರವಾಧ್ಯಕ್ಷ ರಮೇಶ್, ಸೋಮವಾರಪೇಟೆ ಅಧ್ಯಕ್ಷ ಚಂದ್ರಹಾಸ, ಸುಂಟಿಕೊಪ್ಪ ಅಧ್ಯಕ್ಷ ಮಣಿಮುಖೇಶ್, ಚಂದ್ರಶೇಖರ್, ಕುಸುಮಾ, ಬಿ.ಜಿ. ಶಾಂತಿ ಇದ್ದರು.