

ನರಗುಂದ: ವೀರಶೈವ ಧರ್ಮದ ಪಂಚಪೀಠಗಳ ಗುರುಪರಂಪರೆಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಜಗದ್ಗುರು ಪೀಠದ ಶಾಖಾಮಠವಾಗಿರುವ ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಪಂಚ ಶಿವಲಿಂಗಗಳಿಗೆ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಸನಾತನ ವೀರಶೈವ ಧಾರ್ಮಿಕ ಪರಂಪರೆಯ ಪೂಜಾ ಕೈಂಕರ್ಯ ಫೆ. 26ರಂದು ಜರುಗಲಿವೆ.
ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಮಹಾತಪಸ್ವಿ ಲಿಂಗೈಕ್ಯ ಶ್ರೀಮದ್ ಘನಲಿಂಗ ಚರಚಕ್ರವರ್ತಿ ಚರಮೂರ್ತಿ ಚೆನ್ನವೀರ ದೇವರು, ಗುರು ಚರಮೂರ್ತಿ ಚೆನ್ನವೀರ ದೇವರು ಹಾಗೂ ಅವರ ಗುರುವರ್ಯರ ಕರ್ತೃ ಗದ್ದುಗೆಗಳ ಮೇಲೆ ಪ್ರಷ್ಠಾಪನೆಗೊಂಡಿರುವ ಪಂಚ ಶಿವಲಿಂಗಗಳ ಸನ್ನಿಧಾನದಲ್ಲಿ ಅರ್ಘ್ಯ, ಪಾದ್ಯ, ಆಚಮನ, ಕ್ಷೀರ, ದಧಿ, ಘೃತ, ಮಧು, ಶರ್ಕರ, ಮಧುಪರ್ಕ, ಭಸ್ಮೋದಕ ಸಹಿತ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ವೇ.ಮೂ. ವೀರಯ್ಯಶಾಸ್ತ್ರಿಗಳ ವೈದಿಕತ್ವದಲ್ಲಿ ಜರುಗಲಿವೆ. ಭಕ್ತ ಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಗುರುಕೃಪಾಕಾರುಣ್ಯಕ್ಕೆ ಪಾತ್ರರಾಗುವಂತೆ ಶ್ರೀ ಪಂಚಗೃಹ ಗುಡ್ಡದ ಹಿರೇಮಠದ ಲಿಂಗೈಕ್ಯ ಶ್ರೀ ಚರಮೂರ್ತಿ ಚೆನ್ನವೀರ ದೇವರ ವಂಶಸ್ಥರಾದ ಎಂ.ಆರ್. ಹಿರೇಮಠ ತಿಳಿಸಿದ್ದಾರೆ.