ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ

CHN-BILIGIRIRANGA TEMPLE
Published on

ಯಳಂದೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ನಡೆದಿದ್ದು 42 ಲಕ್ಷ ರೂ. ಸಂಗ್ರಹವಾಗಿದೆ.

3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 42,11,305 ರೂ. ನಗದು, 132 ಅಮೆರಿಕನ್ ಡಾಲರ್, ನೇಪಾಳದ 20 ರೂಪಾಯಿಸ್, ಗಾಂಬಿಯಾದ 50 ಡಾಲಸೀಸ್, ಯುನೈಟೆಡ್ 15 ಡಿರಮ್ಸ್ ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಕಂಡುಬಂದಿವೆ.
ತಹಸೀಲ್ದಾರ್ ಶಿವರಾಜು, ಉಪತಹಸೀಲ್ದಾರ್ ಪುಷ್ಪಾವತಿ, ಇಒ ಮೋಹನಕುಮಾರ್, ಸಿಬ್ಬಂದಿ ಶಾಂತಿ, ರಾಜಣ್ಣ, ಶೇಷಾದ್ರಿ, ಪೊಲೀಸ್ ಇಲಾಖೆ ಮುರಳಿ, ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಪ್ರಭುಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net