ಬಿಳಿಗಿರಿರಂಗನಾಥ ದೇಗುಲ ಬಂದ್

Oplus_0
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲವನ್ನು ಭಾನುವಾರ ಮಧ್ಯಾಹ್ನದಿಂದಲೇ ಮುಚ್ಚಲಗಿತ್ತು.
Published on

ಯಳಂದೂರು: ಭಾನುವಾರ ಸಂಭವಿಸಿದ ಖಗ್ರಾಸ ಚಂದ್ರಹಣದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಸೇರಿದಂತೆ ವಿವಿಧ ದೇಗುಲಗಳನ್ನು ಮಧ್ಯಾಹ್ನದಿಂದಲೇ ಮುಚ್ಚಲಾಗಿತ್ತು.

ಸರ್ಕಾರಿ ರಜೆ ದಿನ ಹಾಗೂ ವಾರಾಂತ್ಯಗಳಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಧಾರ್ಮಿಕ ನಿಯಮಾವಳಿಗಳ ಪ್ರಕಾರ ಮಧ್ಯಾಹ್ನ 3 ಗಂಟೆಯ ನಂತರ ದೇಗುಲವನ್ನು ಬಂದ್ ಮಾಡಲಾಗಿತ್ತು. ಧಾರ್ಮಿಕ ವಿಧಿಗಳ ಪ್ರಕಾರ ಚಂದ್ರ ಹಾಗೂ ಸೂರ್ಯ ಗ್ರಹಣದ ಸಮಯದಲ್ಲಿ ದೇಗುಲವನ್ನು ಬಂದ್ ಮಾಡಲಾಗುತ್ತದೆ. ಭಕ್ತರಿಗೆ ದರ್ಶನ ಇರುವುದಿಲ್ಲ. ಮಜ್ಜನ ಮಾಡಿ ದೇಗುಲವನ್ನು ಬಾಗಿಲು ಹಾಕಿ ಸೋಮವಾರ ಬೆಳಗ್ಗೆ ಶುದ್ಧೋದಕ ಎನ್ನುವ ಧಾರ್ಮಿಕ ವಿಧಿಯನ್ನು ನೆರವೇರಿಸಿ ದೇಗುಲವನ್ನು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇಗುಲದ ಪಾರುಪತ್ತೇದಾರ ರಾಜು ಮಾಹಿತಿ ನೀಡಿದರು.

ಪಟ್ಟಣದ ಭೂಲಕ್ಷ್ಮಿ ವರಾಹಸ್ವಾಮಿ, ಗೌರೇಶ್ವರ ದೇಗುಲ, ಕಂದಹಳ್ಳಿ ಮಹದೇಶ್ವರ ದೇಗುಲ ಸೇರಿದಂತೆ ಅನೇಕ ಪ್ರಮುಖ ದೇಗುಲಗಳನ್ನು ಮುಚ್ಚಲಾಗಿತ್ತು. ಚಂದ್ರಗ್ರಹಣ ರಾತ್ರಿ ವೇಳೆ ಇದ್ದರೂ ಸಹ ಪಟ್ಟಣದಲ್ಲಿ ಮಧ್ಯಾಹ್ನದಿಂದಲೇ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ಪಟ್ಟಣದ ಭಾನುವಾರದ ಸಂತೆಯಲ್ಲೂ ಕೂಡ ಮಧ್ಯಾಹ್ನದ ನಂತರ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net