ನಾಗಮೋಹನದಾಸ್ ವರದಿ ಜಾರಿಗೆ ತನ್ನಿ

Bilagi-22-1a
Published on

ಬೀಳಗಿ: ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಬೀಳಗಿ ತಾಲೂಕು ವಾಲ್ಮೀಕಿ ಜನಾಂಗ ಹಿತಾಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ತೆಗ್ಗಿ, ಬಿಸನಾಳ, ಶಿವಪುರ ಗ್ರಾಮದಿಂದ ಆಗಮಿಸಿದ ಪದಾಧಿಕಾರಿಗಳು ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಗುರುವಾರ 2ನೇ ದಿನದ ಧರಣಿ ಸತ್ಯಾಗ್ರಹ ನಡೆಸಿದರು.

ಸಮಾಜದ ಪ್ರಮುಖ ಜಿ.ಆರ್. ಹವೇಲಿ ಮಾತನಾಡಿ, ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಬೇಕಾಗಿದೆ. ಈಗಾಗಲೇ ನ್ಯಾ.ನಾಗಮೋಹನದಾಸ್ ವರದಿಯಲ್ಲಿ ಶೇ.7.5 ಮೀಸಲಾತಿ ಅವಶ್ಯ ಇದೆ ಎಂದು ತಿಳಿಸಲಾಗಿದೆ. ವಾಲ್ಮೀಕಿ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದೆ ಬರಬೇಕಾಗಿದೆ ಎಂದು ಹೇಳಿದರು.

ವೀರ ಸಿಂಧೂರ ಲಕ್ಷ್ಮಣ ಕಮಿಟಿ ಅಧ್ಯಕ್ಷ ಸುರೇಂದ್ರ ನಾಯಕ, ಟಿ.ವೈ. ಜಾನಮಟ್ಟಿ, ಜಿಪಂ ಸದಸ್ಯ ಮಗಿಯಪ್ಪ ದೇವನಾಳ, ಕೃಷಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಬೆನ್ನಪ್ಪ ಬೀಳಗಿ, ಶ್ರೀಶೈಲ ಅಂಟಿನ, ಬಿ.ಬಿ. ನಾಯಕ, ಜಯಪ್ಪ ಕೂಡಗಿ, ತೆಗ್ಗಿ ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಬಿ.ಎಸ್. ಗೋನಾಳ, ತಿಪ್ಪಣ್ಣ ಸಂಜೀವಪ್ಪಗೋಳ, ಪಪಂ ಸದಸ್ಯ ಹುಚ್ಚಪ್ಪ ಕೌಲಗಿ, ಬಿ.ಬಿ. ನಾಯಕ, ಸೋಮಲಿಂಗ ಬೇಡರ, ಶಂಕ್ರಪ್ಪ ತಳವಾರ, ಪ್ರೇಮಾ ನಾಯ್ಕರ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net