ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ; ಪೊಲೀಸ್ ಪೇದೆ ಮೇಲೆ ಖಾರಪುಡಿ ಎರಚಿ ಪರಾರಿ

Chain Snatchers
Published on

ಹೊಸದುರ್ಗ: ಇಲ್ಲಿನ ಅಯ್ಯಪ್ಪಸ್ವಾಮಿ ಬಡಾವಣೆಯಲ್ಲಿ ಮಂಗಳವಾರ ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತಿನಿಂದ ಇಬ್ಬರು ಕಳ್ಳರು ಎರಡು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೀನಾಕ್ಷಮ್ಮ ಎಂಬುವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಒಬ್ಬಾತ, ಕುತ್ತಿಗೆಯಲ್ಲಿದ್ದ ಎರಡು ಸರಗಳನ್ನು ಕಿತ್ತುಕೊಂಡು ಸ್ವಲ್ಪ ದೂರದಲ್ಲಿಯೇ ಬೈಕಿನಲ್ಲಿ ಕಾಯುತ್ತಿದ್ದ ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ.

ಮಹಿಳೆ ಕೂಗಿಕೊಂಡಾಗ ಸ್ಥಳದಲ್ಲಿದ್ದ ಹೊಸದುರ್ಗ ಪೊಲೀಸ್ ಠಾಣೆಯ ಪೇದೆ ಮಧು ಬೈಕಿನಲ್ಲಿ ಕಳ್ಳರನ್ನು ಹಿಂಬಾಲಿಸಿದ್ದಾರೆ. ಕಳ್ಳರು ಪೇದೆ ಮೇಲೆ ಖಾರದಪುಡಿ ಎರಚಿ ಪರಾರಿಯಾಗಿದ್ದಾರೆ.

ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಜಿಲ್ಲಾ ಪೊಲೀಸ್ ಹೆಚ್ಚುವರಿ ಎಸ್‌ಪಿ ಮಹಾಲಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net