ಪುತ್ತೂರಿನಿಂದ ಬೈಕ್ ಸವಾರಿಗೆ ತೆರಳಿದ್ದವರಿಗೆ ಅಪಘಾತ, ಓರ್ವ ಸಾವು

Manoj accident
Published on

ಪುತ್ತೂರು: ನಗರದಿಂದ ತಂಡವಾಗಿ ಬೈಕ್ ಸವಾರಿಗೆ ತೆರಳಿದ್ದವರ ಪೈಕಿ ಓರ್ವ ಬೈಕ್ ಸವಾರ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟರೆ, ಅದೇ ತಂಡದ ಇನ್ನೊಂದು ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಪುತ್ತೂರಿನಿಂದ 8 ಬೈಕ್‌ಗಳಲ್ಲಿ ತಂಡ ಬೈಕ್ ರೈಡಿಂಗ್‌ಗೆ ಹೊರಟಿತ್ತು. ಈ ಪೈಕಿ ಪುತ್ತೂರಿನ ಕೌಡಿಚ್ಚಾರ್ ಸಿಆರ್ ಸಿ ಕಾಲನಿ ನಿವಾಸಿ ಮನೋಜ್ ಚಲಾಯಿಸುತ್ತಿದ್ದ ಬೈಕ್ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಕಡಬ ತಾಲೂಕಿನ ಎಂಜಿರ ಸಮೀಪ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ತಂಡದ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಎಲ್ಲರೂ ಹಿಂತಿರುಗಿ ಬಂದಿದ್ದಾರೆ. ಹೀಗೆ ಬರುತ್ತಿರುವಾಗ ತಂಡದ ಮತ್ತೊಬ್ಬ ಸದಸ್ಯ ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net