ಬಸ್ ಹರಿದು ಬೈಕ್ ಸವಾರ ಸಾವು

crime
Published on

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಬಸ್ ಹರಿದು ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿಯ ಗೋಕುಲ ರಸ್ತೆಯ ಪರ್ನ್ ಹೋಟೆಲ್ ಮುಂಭಾಗದಲ್ಲಿ ಸೋಮವಾರ ಸಂಭವಿಸಿದೆ.

ನಾವಳ್ಳಿ ಪ್ಲಾಟ್ ನಿವಾಸಿ ತಿರುಪತಿ ಹನುಮಂತಪ್ಪ ವಡ್ಡರ್ (40) ಮೃತರು. ಮುಂದೆ ಹೊರಟ್ಟಿದ್ದ ಬೈಕ್ ಸವಾರಗೆ ಬಸ್ ಟಚ್ ಆಗಿದ್ದು, ಕೆಳಗಡೆ ಬಿದಿದ್ದಾನೆ. ಆಗ ಬಸ್ ಬೈಕ್ ಸವಾರನ ಮೇಲೆ ಹರಿದಿದೆ ಎಂದು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net