ಬಸ್ ಚಲಿಸಿ ಬೈಕ್ ಸವಾರ ಮೃತ್ಯು

accident-15
Published on

ಕಾಸರಗೋಡು: ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಸಂದರ್ಭ ಹಿಂದಿನಿಂದ ಬಂದ ಬಸ್ ಬೈಕ್ ಮೇಲಿನಿಂದ ಸಂಚರಿಸಿದ ಪರಿಣಾಮ ಬೈಕ್ ಸವಾರ ಪಾಲಕುನ್ನು ಏರೋಲ್ ಚಂದ್ರಾಪುರ ನಿವಾಸಿ ವಿಷ್ಣು(29) ಎಂಬುವರು ಮೃತಪಟ್ಟಿದ್ದಾರೆ. ವಿಷ್ಣು ಅವರು ಬುಧವಾರ ಪಾಲಾಲಿಗೆ ತೆರಳುವ ಸಂದರ್ಭ ಕೂತುಪರಂಬತಲಶ್ಯೇರಿ ರಸ್ತೆಯ ನಗರಸಭಾ ಕಚೇರಿ ಎದುರು ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ವಿಷ್ಣು ಅವರನ್ನು ಕೂತುಪರಂಬ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net