ಜೀಪ್​ ಡಿಕ್ಕಿಯಾಗಿ ಬೈಕ್​ ಸವಾರನಿಗೆ ಗಾಯ

crime
Published on

ಮುಳಬಾಗಿಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ &75 ರ ಕಾಂತರಾಜ ವೃತ್ತದ ಬಳಿ ಭಾನುವಾರ ಬೈಕ್​ಗೆ ಪೊಲೀಸ್​ ಜೀಪ್​ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಕೋಮಾಸ್ಥಿತಿಯಲ್ಲಿದ್ದು, ಗಾಯಾಳುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಜಿಎ್​ ತಾಲೂಕು ಬಡಮಾಕನಹಳ್ಳಿಯ ನಾರಾಯಣಸ್ವಾಮಿ ಗಾಯಾಳು.

ಬೈಕ್​ ಸವಾರ ಬಡಮಾಕನಹಳ್ಳಿಯಿಂದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದಲ್ಲಿ ನಡೆಯುತ್ತಿರುವ ಕುರುಬ ಸಮಾಜದ ದ್ಯಾವರಕ್ಕೆ ಹೋಗುತ್ತಿದ್ದರು. ಕೋಲಾರ ನಗರದ ಮಹಿಳಾ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಶಂಕರ ಆಚಾರಿ ಅವರು ಪ್ರಕರಣವೊಂದರ ಸ್ಥಳ ಮಹಜರಿಗೆ ತೆರಳುತ್ತಿದ್ದಾಗ ಕಾಂತರಾಜ ವೃತ್ತದ ಬಳಿ ಪೊಲೀಸ್​ ಜೀಪ್​ ಬೈಕ್​ಗೆ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಬೈಕ್​ ಸವಾರದ ತಲೆ ಹಾಗೂ ಕೈ ಕಾಲುಗಳಿಗೆ ತೀವ್ರ ಗಾಯವಾಗಿ ಪ್ರಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಸ್ಥಳದಲ್ಲಿದ್ದವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net