ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮರಣ

accident-15
Published on

ನರೇಗಲ್ಲ: ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹಾಲಕೆರೆ ಗ್ರಾಮದ ಹತ್ತಿರ ಮಂಗಳವಾರ ಸಂಭವಿಸಿದೆ. ಯಲಬುರ್ಗಾ ತಾಲೂಕಿನ ಮುಧೋಳ ನಿವಾಸಿ ಹುಸೇನಭಾಷ ಮುರ್ತುಜಾಸಾಬ್ ಚಳಗೇರಿ (20) ಮೃತ ಸವಾರ. ವಾಹನ ಡಿಕ್ಕಿ ಹೊಡೆದಿದ್ದರಿಂದ ಈತನ ತಲೆ ಮತ್ತು ಮುಖಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net