

ಹುಬ್ಬಳ್ಳಿ: ವೇಗವಾಗಿ ಹೊರಟಿದ್ದ ದ್ವಿಚಕ್ರವಾಹನ ಸವಾರ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಅಂಚಟಗೇರಿ ಗ್ರಾಮ ಬಳಿಯ ಹುಬ್ಬಳ್ಳಿ-ಕಾರವಾರ ರಿಂಗ್ ರಸ್ತೆಯಲ್ಲಿ ನಡೆದಿದೆ.
ರಾಯನಾಳದ ಶರೀಫಶಾ ಮಕಾನದಾರ(33) ಮೃತರು. ನಗರದಿಂದ ಅಂಚಟಗೇರಿ ಕಡೆಗೆ ಅತಿ ವೇಗವಾಗಿ ಹೊರಟಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ತಲೆ ಹಾಗೂ ಕೈಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.