ಅಪಘಾತದಲ್ಲಿ ಬೈಕ್ ಸವಾರ ಮರಣ

Bike Accident_2
Published on

ನರಗುಂದ: ದ್ವಿಚಕ್ರ ವಾಹನಕ್ಕೆ ಮತ್ತೊಂದು ಬೈಕ್ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೊಣ್ಣೂರಿನ ಡಾಭಾವೊಂದರ ಬಳಿ ಗುರುವಾರ ರಾತ್ರಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಲಕ್ಷ್ಮಣ ಅಖಂಡಪ್ಪ ಭಾರತಿ (34) ಮೃತ ಬೈಕ್ ಸವಾರ. ಈತ ನರಗುಂದದಿಂದ ಕೊಣ್ಣೂರ, ಬಾದಾಮಿ ಮಾರ್ಗವಾಗಿ ಗುಳೇದಗುಡ್ಡಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಈ ಕುರಿತು ಮೃತನ ಸಹೋದರ ರಾಮು ಭಾರತಿ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ಮಂಜುನಾಥ ನಡುವಿನಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net