ಅಪಘಾತದಲ್ಲಿ ಬೈಕ್​ ಸವಾರ ಸಾವು

06 KLR 09
Published on

ಕೋಲಾರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಟಮಕ ಸಮೀಪದ ಓವರ್​ ಬಳಿ ಭಾನುವಾರ ದ್ವಿಚಕ್ರ ವಾಹನ ಅಪಘಾತದಲ್ಲಿ ಬೈಕ್​ ಸವಾರ ಸಳ್ಥದಲ್ಲೆ ಮೃತಪಟ್ಟಿದ್ದು, ಹಿಂಬದಿ ಸವಾರ ತೀವ್ರ ಗಾಯಾಗೊಂಡಿದ್ದಾನೆ.

ಬಂಗಾರಪೇಟೆ ತಾಲೂಕಿನ ಜುಂಜನಹಳ್ಳಿ ಭೀಮ (26) ಮೃತ. ಕೋಲಾರದ ಕಠಾರಿಪಾಳ್ಯದ ಸಂತೋಷ್​ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಅಫಘಾತವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸ್​ ಠಾಣೆಯ ವೃತ್ತ ನಿರೀಕ್ಷಕರಾದ ಲೋಕೇಶ್​, ಹಾಗೂ ಡಿವೈಎಸ್ಪಿ ನಾಗ್ತೆ ಅವರು ಪರಿಶೀಲನೆ ನಡೆಸಿ ಗಾಯಾಗಳುವನ್ನು ಆರ್​.ಎಲ್​ ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದರು. ಗಾಯಾಳುವನ್ನು ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಯ ಪಾಲಕರಿಗೆ ಸಂಚಾರಿ ಪೊಲೀಸ್​ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುವ ಮೂಲಕ ಕಷ್ಟ ಕಾಲದ ಆಪತ್ಬಾಂದವರಾಗಿ ಮಾನವೀಯತೆ ಮರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net