ಕಂಟೈನರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

Bike Accident
Published on

ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಬಾವಿಕೊಪ್ಪಲು ಗೇಟ್ ಬಳಿ ಬುಧವಾರ ಸಂಜೆ ಬೈಕ್ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೋಬಳಿಯ ದೇವನಹೊಸೂರು ಗ್ರಾಮದ ನಿವಾಸಿ ಶಶಿ (24) ಮೃತ ಯುವಕ. ಬುಧವಾರ ಸಂಜೆ ಬೈಕ್‌ನಲ್ಲಿ ನಾಗಮಂಗಲ ಕಡೆಯಿಂದ ಮನೆಗೆ ಹೋಗುತ್ತಿದ್ದಾಗ ಬಾವಿಕೊಪ್ಪಲು ಗೇಟ್ ಬಳಿ ವೇಗವಾಗಿ ಬಂದ ಕಂಟೈನರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಶಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net