ಗುಂಡ್ಲುಪೇಟೆ : ತಾಲೂಕಿನ ಹಂಗಳ ಗ್ರಾಮದಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್‌ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಗ್ರಾಮದ ಡೇರಿ ಉದ್ಯೋಗಿ ಮನು(29) ಸಾವಿಗೀಡಾದ ದುರ್ದೈವಿ. ಗ್ರಾಮದ ಶನೈಶ್ಚರ ದೇವಾಲಯದ ಎದುರು ಹೋಗುತ್ತಿದ್ದ ಮನು ಅವರ ಬೈಕ್‌ಗೆ ಎದುರಿನ ವೈನ್‌ಷಾಪ್ ಕಡೆಯಿಂದ ವೇಗವಾಗಿ ಹೊರಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮನು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವಿಗೀಡಾದರು.
ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪೊಲಿಸರು ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದರು. ಅಪಘಾತ ನಡೆಸಿದ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.