

ಉಳ್ಳಾಗಡ್ಡಿ-ಖಾನಾಪೂರ: ಯಮಕನಮರಡಿ ಕಡೆಯಿಂದ ಸಂಕೇಶ್ವರದತ್ತ ತೆರಳುತ್ತಿದ ಕಾರೊಂದು ಉಳ್ಳಾಗಡ್ಡಿ&ಖಾನಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಟನೆ ಶನಿವಾರ ನಡೆದಿದೆ.
ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಚಂದನಕೂಡ ಗ್ರಾಮದ ಲಕ್ಕಪ್ಪ ರಾಮಾ ಬೋಲಗೇರಿ(77)ಮೃತ ಬೈಕ್ ಸವಾರ. ಮತ್ತೊಂದು ಬೈಕ್ನ ಯಮಕನಮರಡಿಯ ಕೆಂಪಣ್ಣಾ ಹಣಮಂತ ಬರಗಾಲಿ, ಭೀಮಪ್ಪ ಸುರೇಶ ಬರಗಾಲಿ ಗಾಯಗೊಂಡವರು.
ಉಳ್ಳಾಗಡ್ಡಿ&ಖಾನಾಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಮೊದಲು ಒಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಇದೇ ಕಾರು ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.