ಚಲಿಸುತ್ತಿದ್ದ ಬೈಕ್​ನಿಂದ ಬಿದ್ದು ಮಹಿಳೆ ಸಾವು

Crime_20250831003830572.jpg
Published on

ಹಾವೇರಿ: ಚಲಿಸುತ್ತಿದ್ದ ಬೈಕ್​ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಯರಾ ಪೆಟ್ರೋಲ್​ ಬಂಕ್​ ಬಳಿ ಭಾನುವಾರ ನಡೆದಿದೆ.

ಇಲ್ಲಿಯ ಬಸವೇಶ್ವರ ನಗರದ ಪ್ರೇಮಾ ಮಲ್ಲಿಕಾರ್ಜುನ ಸುಳ್ಳಳ್ಳಿ (47) ಮೃತ ಮಹಿಳೆ.

ಇವರು ಬೈಕ್​ನಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದರು. ಈ ಸಮಯದಲ್ಲಿ ಬೈಕ್​ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net