ಬೈಕ್‌ನಿಂದ ಬಿದ್ದು ಮೃತಪಟ್ಟ ಮಹಿಳೆ

Crime Logo
Published on

ರಾಣೆಬೆನ್ನೂರ: ಬೈಕ್‌ನಿಂದ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಬುಧವಾರ ಸಂಭವಿಸಿದೆ.
ದಾವಣಗೆರೆ ನಗರದ ಮೌನೇಶ್ವರ ಬಡಾವಣೆಯ ಸರೋಜಾ ಬಸವರಾಜಪ್ಪ (49) ಮೃತ ಮಹಿಳೆ.
ಇವರು ಕೋಡಿಯಾಲ ಹೊಸಪೇಟೆ ಗ್ರಾಮದಿಂದ ಹರಿಹರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net