

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಬೈಕ್ ಕಳ್ಳರ ಹಾವಳಿ ಹೆಚ್ಚುತ್ತಿದ್ದು ಇದೀಗ ಮತ್ತೊಂದು ಬೈಕ್ ಕಳ್ಳತನದ ಪ್ರಕರಣ ದಾಖಲಾಗಿದೆ.
ನಗರದ ಲಿಂಗರಾಜ್ ಪುರಂನ ಶರವಣ ಎನ್ನುವವರು ತಮ್ಮ ಮನೆಯ ಕಾಂಪೌಂಡ್ ಒಳಗೆ RX 135 ಬೈಕ್ ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ ಎನ್ನುವುದನ್ನು ಖಾತ್ರಿ ಮಾಡಿಕೊಂಡ ಕಳ್ಳನೊಬ್ಬ ಕಾಂಪೌಂಡ್ ಒಳಗೆ ನುಗ್ಗಿ ಬೈಕ್ನ್ನು ಕದ್ದಿದ್ದಾನೆ.
ಕಳ್ಳ ಕಾಂಪೌಂಡ್ ಒಳಗಿಂದ ಬೈಕನ್ನು ಕದ್ದು ಸಾಗುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬಾಣಸವಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ,