ಕಲಘಟಗಿಯಲ್ಲಿ ಬೈಕ್ ಕಳ್ಳನ ಬಂಧನ

byke
Published on

ಕಲಘಟಗಿ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದು ಬಂಧಿತನಿಂದ 2.93 ಲಕ್ಷ ರೂ. ಮೌಲ್ಯದ 5 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಧಾರವಾಡ ತಾಲೂಕಿನ ಕಣವಿಹೊನ್ನಾಪುರದ ಕಶ ಧಾರವಾಡ (23) ಬಂಧಿತ ಆರೋಪಿ. ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಹತ್ತಿರ ಅನುಮಾವಾಸ್ಪದವಾಗಿ ಬೈಕ್ ಮೇಲೆ ತಿರುಗಾಡುವಾಗ ಪೊಲೀಸರು ಬೆನ್ನು ಹತ್ತಿ ಹನ್ನೆರಡು ಮಠದ ಹತ್ತಿರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಪಿಎಸ್‌ಐ ಸಿ.ಎನ್. ಕರವಿರಪ್ಪನವರ, ಸಿಬ್ಬಂದಿ ಮಹಾಂತೇಶ ನಾನಾಗೌಡ್ರ, ಗೋಪಾಲ ಪಿರಗಿ, ಎಂ.ಎಸ್. ಎಲಿಗಾರ, ಮಲ್ಲಿಕಾರ್ಜುನ ಎಂ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net