ಹಂಪಿಯಲ್ಲಿ ಬೈಕ್ ಕಳ್ಳನ ಬಂಧನ

17 HPT 6
Published on

ಹೊಸಪೇಟೆ: ತಾಲೂಕಿನ ಹಂಪಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ವ್ಯಕ್ತಿಯಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾರ ಗ್ರಾಮದ ದೊಡ್ಡಬಸಪ್ಪ(೫೨) ಬಂಧಿತ. ಆರೋಪಿಯಿಂದ ೬.೪೦ ಲಕ್ಷ ರೂ. ಮೌಲ್ಯದ ೮ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಲ ದಿನಗಳಿಂದ ಹಂಪಿ ಠಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ ಬೈಕ್ ಕಳ್ಳತನವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದರಿಂದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ದೊಡ್ಡಬಸಪ್ಪ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಎಸ್ಪಿ ಶ್ರೀಹರಿಬಾಬು, ಡಿಎಸ್ಪಿ ಡಾ.ಮಂಜುನಾಥ, ಹಂಪಿ ಸಿಪಿಐ ಶಿವರಾಜ್ ಇಂಗಳೆ ಮಾರ್ಗದರ್ಶನದಲ್ಲಿ ಹಂಪಿ ಪೊಲೀಸ್ ಠಾಣೆ ಪಿ.ಎಸ್.ಐ ಎಸ್.ಕೆ.ಪ್ರಕಾಶ, ಶಿವಕುಮಾರ ನಾಯ್ಕ ನೇತೃತ್ವದಲ್ಲಿ, ಎಎಸ್‌ಐ ಕೆ.ಕರಿಯಪ್ಪ, ಪೇದೆಗಳಾದ ಶರಣಪ್ಪ, ಕೆಂಚಪ್ಪ, ಮಾರುತಿ, ತಿಮ್ಮಪ್ಪ, ಜಗದೀಶ, ಮೌನೇಶ, ನಾಗರಾಜ, ಕುಮಾರ್ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net