

ಮೈಸೂರು: ಬೈಕ್ ಕಳ್ಳನನ್ನು ಬಂಧಿಸಿರುವ ಪೊಲೀಸರು, 4 ಲಕ್ಷ ರೂ. ಮೌಲ್ಯದ 8 ದ್ವಿಚಕ್ರವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹುಲ್ಲಹಳ್ಳಿ ಗ್ರಾಮದಲ್ಲಿ ಜು.11ರಂದು ಹಗಲು ಹೊತ್ತಿನಲ್ಲೇ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಕುಮಾರ್ ಅವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಜಿಲ್ಲಾ ಅಪರಾಧ ಪತ್ತೆ ದಳವು ಆರೋಪಿಯನ್ನು ಬಂಧಿಸಿತ್ತು. ಇದರಿಂದ ಹುಲ್ಲಹಳ್ಳಿ ಠಾಣೆಯ 1, ಮೈಸೂರಿನ ದೇವರಾಜ ಠಾಣೆಯ 3, ಕೃಷ್ಣರಾಜ ಠಾಣೆಯ 1, ಮಂಡ್ಯ ಪಶ್ಚಿಮ ಠಾಣೆಯ 2, ಮಂಡ್ಯ ಪೂರ್ವ ಠಾಣೆಯ 1 ಬೈಕ್ ಕಳ್ಳತನ ಪ್ರಕರಣ ಪತ್ತೆಯಾಗಿವೆ.