ಬೈಕ್ ಕಳ್ಳನ ಬಂಧನ

BDM 5-1
ಬಂಧಿತನಿಂದ ವಶಪಡಿಸಿಕೊಂಡ ಬೈಕ್‌ಗಳೊಂದಿಗೆ ಅಪರಾಧ ವಿಭಾಗದ ಪಿಎಸ್‌ಐ ವಿಜಯಕುಮಾರ ರಾಠೋಡ, ಸಿಪಿಐ ಕರೆಪ್ಪ ಬನ್ನೆ, ವಿಠ್ಠಲ ನಾಯಕ ಹಾಗೂ ಸಿಬ್ಬಂದಿ ಇದ್ದಾರೆ.
Published on

ಬಾದಾಮಿ: ಪಟ್ಟಣದಲ್ಲಿ ಪೊಲೀಸರು ಭಾನುವಾರ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿ, ಆತನಿಂದ 1.40 ಲಕ್ಷ ರೂ. ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದ ಮಂಜುನಾಥ ಹಿರೇಯಮನೂರಪ್ಪ ವಡ್ಡರ ಬಂಧಿತ ಬೈಕ್ ಕಳ್ಳ.

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಅಪರಾಧ ವಿಭಾಗದ ಪಿಎಸ್‌ಐ ವಿಜಯಕುಮಾರ ರಾಠೋಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net