ಗಂಗಾವತಿ: ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದು, ಆರೋಪಿಯಿಂದ 1.75ಲಕ್ಷ ರೂ. ಮೌಲ್ಯದ 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಹೊಸಳ್ಳಿಯ ರಮೇಶ ಮರಿಯಮ್ಮ ಬಂಧಿತ ಆರೋಪಿಯಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದಲ್ಲಿ ಬೈಕ್ ಕಳವಾಗುತ್ತಿರುವ ಬಗ್ಗೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪತ್ತೆಗಾಗಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ನೇತೃತ್ವದ ತಂಡ ರಚಿಸಲಾಗಿತ್ತು.
ಹೊಸಳ್ಳಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಹಗರಿಬೊಮ್ಮನಹಳ್ಳಿಯಲ್ಲೂ ಬೈಕ್ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಪತ್ತೆ ತಂಡದಲ್ಲಿ ನಗರ ಪಿಐ ಪ್ರಕಾಶ ಮಾಳೆ, ಪಿಎಸೈ ಜಿ.ಟಿ.ನಾಗರಾಜ, ಪೇದೆಗಳಾದ ಚಿರಂಜೀವಿ, ಮರಿಶಾಂತಗೌಡ, ವಿಶ್ವನಾಥ, ರಾಘವೇಂದ್ರ,ಸುಭಾಷ ಇದ್ದರು. ಆರೋಪಿ ಪತ್ತೆ ಹಚ್ಚಿದಕ್ಕೆ ತಂಡಕ್ಕೆ ಎಸ್ಪಿ ರಾಂ ಎಲ್ ಅರಸಿದ್ಧಿ ವಿಶೇಷ ಬಹುಮಾನ ೋಷಿಸಿದ್ದಾರೆ.