ಬೈಕ್ ಕಳ್ಳನ ಬಂಧನ, 32 ಮೋಟರ್ ಸೈಕಲ್ ಜಪ್ತಿ, ಗದಗ, ಕೊಪ್ಪಳ, ಬಾಗಲಕೋಟೆ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನ

8 RON 2
Published on

ರೋಣ: ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್ ಹಿಂಬದಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಕುರಿತು ಏ. 3ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ತಾಲೂಕಿನ ಗುಜಮಾಗಡಿ ಗ್ರಾಮದ ಈಶ್ವರಪ್ಪ ತಳವಗೇರಿ ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿ ಈಶ್ವರಪ್ಪ ತಳವಗೇರಿ ಏಳೆಂಟು ವರ್ಷಗಳಿಂದ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಗದಗ ಜಿಲ್ಲೆಯ 5, ಕೊಪ್ಪಳ ಜಿಲ್ಲೆಯ 20, ಬಾಗಲಕೋಟೆ ಜಿಲ್ಲೆಯ 6, ಬೆಳಗಾವಿ ಜಿಲ್ಲೆಯ 1 ಮೋಟರ್ ಸೈಕಲ್ ಸೇರಿ ಒಟ್ಟು 32 ಬೈಕ್​ಗಳನ್ನು ಕಳ್ಳತನ ಮಾಡಿದ್ದು, ಪೊಲೀಸರು ಅವೆಲ್ಲವನ್ನೂ ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net