ಬೈಕ್ ಕಳ್ಳನ ಬಂಧನ: 20 ವಾಹನಗಳು ಜಪ್ತಿ

arrested
Published on

ಮೈಸೂರು: ಮೈಸೂರು, ಬೆಂಗಳೂರಿನಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ನಜರ್‌ಬಾದ್ ಪೊಲೀಸರು ಸೋಮವಾರ ಬಂಧಿಸಿದ್ದು, ಆತನಿಂದ 9 ಲಕ್ಷ ರೂ. ಮೌಲ್ಯದ 20 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.


ನಗರದ ನಜರ್‌ಬಾದ್‌ನ ನೆಕ್ಸಸ್ ಮಾಲ್ ಬಳಿ ಸ್ಕೂಟರ್‌ನಲ್ಲಿ ಅನುಮಾನಾಸ್ಪದವಾಗಿ ಆರೋಪಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಮೈಸೂರು, ಮಂಡ್ಯ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.


ಈತನ ಬಂಧನದಿಂದ ನಜರ್‌ಬಾದ್ ಠಾಣೆಯ- 9, ನರಸಿಂಹರಾಜ-1, ಲಷ್ಕರ್-1, ಕೃಷ್ಣರಾಜ-1, ಮಂಡ್ಯ ಪಶ್ವಿಮ -4, ಮಂಡ್ಯ ಪೂರ್ವ-3, ಬೆಂಗಳೂರು ಬ್ಯಾಟರಾಯನಪುರ-1 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

ನಜರ್‌ಬಾದ್ ಠಾಣೆಯ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ, ಪಿಎಸ್‌ಐ ಶ್ರೀನಿವಾಸ್ ಪಾಟೀಲ್, ಸಿಬ್ಬಂದಿ ಎಸ್.ಸತೀಶ್‌ಕುಮಾರ್, ಕಿರಣ್ ರಾಥೋಡ್, ಮಲ್ಲಿಕಾರ್ಜುನ್, ಎಂ.ಸಂಜು, ಸಿಡಿಆರ್ ಘಟಕದ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net