ಬೈಕ್ ಕಳ್ಳನ ಬಂಧನ

3 bikes stolen
ಬೈಕ್ ಕಳ್ಳನನ್ನು ಬಂಧಿಸಿರುವ ಗುಳೇದಗುಡ್ಡ ಪೊಲೀಸರು.
Published on

ಗುಳೇದಗುಡ್ಡ: ಬೈಕ್ ಕಳ್ಳತನ ಮಾಡುತ್ತಿದ್ದ ಬಾಗಲಕೋಟೆ ನವನಗರದ ಹುಲಗಪ್ಪ ಗಂಗಪ್ಪ ಬೆನಕಟ್ಟಿ ಎಂಬಾತನನ್ನು ಸ್ಥಳೀಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಸ್ ನಿಲ್ದಾಣದ ಹತ್ತಿರ ಬೈಕ್ ಮೇಲೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಸವಾರನನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆತನಿಂದ ಕದ್ದ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾದಾಮಿ ಸಿಪಿಐ ಬಿ.ಡಿ. ಧೂಳಖೇಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗುಳೇದಗುಡ್ಡ, ಬಾದಾಮಿ ಹಾಗೂ ವಿಜಯಪುರದಲ್ಲಿ ಒಟ್ಟು 3 ಬೈಕ್‌ಗಳನ್ನು ಕಳವು ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತನಿಂದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಪಿಎಸ್‌ಐ ಲಕ್ಷ್ಮಣ ಆರಿ, ಕ್ರೈಂ ಪಿಎಸ್‌ಐ ಸಿ.ಬಿ. ಕಿರಿಸ್ಯಾಳ, ಎಎಸ್‌ಐ ಸಿ.ವೈ. ಸಿದ್ದಣ್ಣವರ, ಎಸ್.ಐ. ಬಿಳೆಕುದುರಿ, ಎಲ್.ಎಂ. ಭಜಂತ್ರಿ, ಜಿ.ವಿ. ಮನ್ನಿಕಟ್ಟಿ, ಯಲ್ಲಪ್ಪ ಮನ್ನಿಕಟ್ಟಿ, ಆನಂದ ಬಿಂಜವಾಡಗಿ, ವಿಜಯ ತುಂಬದ, ಶರಣಪ್ಪ ಕೂಡ್ಲಪ್ಪನವರ, ನಾಗರಾಜ ಕುಂದರಗಿ, ಹನುಮಂತ ಬೋವಿ, ಎಸ್.ಐ. ಡಂಗಿ, ಸಂಗಮೇಶ ಮರೋಳ, ಕಲ್ಲಪ್ಪ ಭರಣಿ, ಎಚ್.ವೈ.ಮಾಗಿ, ಎಂ.ಕೆ. ಪಾಟೀಲ, ಎಂ.ಪಿ. ಕುಂದರಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net