

ಮೈಸೂರು: ದ್ವಿಚಕ್ರವಾಹನ ಕಳ್ಳನನ್ನು ಬಂಧಿಸಿರುವ ನಗರ ವಿ.ವಿ.ಪುರಂ ಪೊಲೀಸರು 95,000 ರೂ. ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ಯಾದವಗಿರಿ ರೈಲ್ವೇ ಟ್ರಾೃಕ್ ಬಳಿ ಒಂದು ದ್ವಿಚಕ್ರವಾಹನ ಸಮೇತ ಒಬ್ಬ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನಗರದ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಪತ್ತೆ ಕಾರ್ಯದಿಂದ
ವಿ.ವಿ.ಪುರಂ, ಹೆಬ್ಬಾಳ್, ದೇವರಾಜ ಹಾಗೂ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.