

ರಾಣೆಬೆನ್ನೂರ: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದು ಆತನಿಂದ ಒಂದೂವರೆ ಲಕ್ಷ ರೂ. ಮೌಲ್ಯದ 3 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರಿನ ಕೊರಚರ ಹಟ್ಟಿ ನಿವಾಸಿ ಅಕ್ಷಯ ಆರ್. ರಮೇಶ (19) ಬಂಧಿತ ಆರೋಪಿ.
ಈತ ಮಟ್ಕಾ ಹಾಗೂ ಇಸ್ಪೀಟ್ ಆಡುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕಳ್ಳತನ ಮಾಡಿದ್ದ ಮೂರು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ, ಪಿಎಸ್ಐ&2 ಎಚ್.ಎನ್. ದೊಡ್ಡಮನಿ, ಸಿಬ್ಬಂದಿ ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಎಚ್.ಟಿ. ನಾಗವತ್, ಲಿಂಗರಾಜ ಕರಿಗಾರ, ಮೋಹನ ಮೇಲಗೇರಿ, ಎಚ್.ಎಲ್. ದನುವಿನಮನಿ, ಮಂಜುನಾಥ ರೋಟಿ, ಕರಿಯಪ್ಪ ಮೆಣಸಿನಾಳ ತಂಡದಲ್ಲಿದ್ದರು.